ಬೆಂಗಳೂರು: ಆಡಳಿತ ಸುಧಾರಣೆಯ ಕ್ರಮವಾಗಿ ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಹೊಸದಾಗಿ 13 ಜಿಲ್ಲೆಗಳನ್ನು ರಚಿಸಿ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು: ಆಡಳಿತ ಸುಧಾರಣೆಯ ಕ್ರಮವಾಗಿ ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಹೊಸದಾಗಿ 13 ಜಿಲ್ಲೆಗಳನ್ನು ರಚಿಸಿ ಅಧಿಸೂಚನೆ ಹೊರಡಿಸಿದೆ.
ಸರ್ಕಾರದ ಯೋಜನೆಗಳ ಸುಗಮ ಜಾರಿಗೆ ಮತ್ತು ಅಧಿಕಾರಿಗಳಿಗೆ ಅನುಕೂಲ ಕಲ್ಪಿಸಿ, ಜನರಿಗೆ ಸೌಲಭ್ಯ ಒದಗಿಸಲು ಪೂರಕವಾಗುವಂತೆ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಹೊಸ ಜಿಲ್ಲೆಗಳ ಪೈಕಿ, ಎನ್‌ಟಿಆರ್ (ವಿಜಯವಾಡ), ಅಲ್ಲೂರಿ ಸೀತಾರಾಮ ರಾಜು (ಪಡೇರು), ಶ್ರೀ ಸತ್ಯಸಾಯಿ (ಪುಟ್ಟಪರ್ತಿ) ಅನ್ನಮಯ್ಯ (ರಾಯಚೋಟಿ) ಮತ್ತು ಶ್ರೀ ಬಾಲಾಜಿ (ತಿರುಪತಿ) ಕೂಡ ಸೇರಿವೆ.
ತೆಲುಗು ಹೊಸ ವರ್ಷ ಯುಗಾದಿಯ ಬಳಿಕ ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದು ಕಾರ್ಯಾರಂಭ ಮಾಡಲಿವೆ ಎನ್ನಲಾಗಿದೆ.
ಹೊಸದಾಗಿ ಅಸ್ವಿತ್ತಕ್ಕೆ ಬಂದಿರುವ ಜಿಲ್ಲೆ ಸಹಿತ ಆಂಧ್ರ ಪ್ರದೇಶದಲ್ಲಿ ಒಟ್ಟು 26 ಜಿಲ್ಲೆಗಳು ಆದಂತಾಗುತ್ತದೆ.
ಹೊಸದಾಗಿ ಅಸ್ವಿತ್ತಕ್ಕೆ ಬಂದಿರುವ ಜಿಲ್ಲೆ