ಮದ್ಯ ವರ್ಜನ ಶಿಬಿರದಲ್ಲಿ 68 ಶಿಬಿರಾರ್ಥಿಗಳು ಭಾಗವಹಿಸಿ ವ್ಯಸನಮುಕ್ತ ಜೀವನವನ್ನು ನಡೆಸಲು ಸಹಕಾರಿಯಾಯಿತು.ಇವರಿಗೆ ಕುಟುಂಬ ದಿನದ ಮಾರ್ಗದರ್ಶನವನ್ನು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಿಸ್ ರವರು ನಡೆಸಿಕೊಟ್ಟರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋನಪ್ಪ ಶೆಟ್ಟಿ ಕಟ್ನಬೆಟ್ಟು ವಹಿಸಿದ್ದರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಗಳು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಗಳು ಆಶೀರ್ವಚನ ನೀಡಿದರು.ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಮಾರೋಪ ಭಾಷಣಗ್ಯೆದು ಪಿಡುಗುಗಳಿಂದ ಸಾಮಾಜಿಕ ಅಸ್ಥಿರತೆ ಅಭಿವೃದ್ದಿಗೆ ಸವಾಲಾಗುತ್ತಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಡೆಸುತ್ತಿರುವ ಚಟುವಟಿಕೆಗಳು ಯಶಸ್ವಿಯಾದುದು. ಸಮಾಜದ ಪ್ರತಿಯೊಬ್ಬರ ಸಹಭಾಗಿತ್ವ ಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಝಡ್ ಎ ಕಯ್ಯಾರ್, ಅಜಿತ್ ಎಂ.ಸಿ. ಲಾಲ್ ಬಾಗ್ ರಾಜಕೀಯ ಮುಖಂಡರು, ಪ್ರವೀಣ್ ಕುಮಾರ್ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ದಕ್ಷಿಣ ಕನ್ನಡ- ೨, ಪೂವಪ್ಪ ಕುಲಾಲ್ ಮುನ್ನಿಪಾಡಿ ಅಧ್ಯಕ್ಷರು ಕುಲಾಲ ಸಮಾಜ ಸಂಘ ಪೈವಳಿಕೆ, ಅಖಿಲೇಶ್ ನಗುಮುಗಂ, ಶ್ರೀನಾಥ್, ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಉಪಸ್ಥಿತರಿದ್ದರು.