ಲಸಿಕೆ ಅದಲು ಬದಲು ಆಗುವುದನ್ನು ತಪ್ಪಿಸುವ ನಿಟ್ಟಿಯಲ್ಲಿ 15ರಿಂದ 18 ವರ್ಷ ವಯಸ್ಸಿನವರಿಗಾಗಿ ಪ್ರತ್ಯೇಕ ಲಸಿಕೆ ಕೇಂದ್ರಗಳು, ಪ್ರತ್ಯೇಕ ಸಾಲು, ಪ್ರತ್ಯೇಕ ಸಿಬ್ಬಂದಿ ಹಾಗೂ ಸಮಯವನ್ನು ನಿಗದಿ ಮಾಡುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಸೂಚಿಸಿದ್ದಾರೆ.
ಡಿಸೆಂಬರ್ 27ರಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ್ದ ಮಾರ್ಗಸೂಚಿಗಳ ಪ್ರಕಾರ, 18 ವರ್ಷದೊಳಗಿನವರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಹಾಕುವಂತೆ ತಿಳಿಸಲಾಗಿದೆ.
ಶನಿವಾರದಿಂದಲೇ ಕೋವಿನ್‌ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಹೊಸ ಮೊಬೈಲ್ ಸಂಖ್ಯೆಗಳನ್ನು ನೀಡುವ ಮೂಲಕ ಖಾತೆ ತೆರೆದು ನೋಂದಾಯಿಸಿಕೊಳ್ಳಬಹುದಾಗಿದೆ ಅಥವಾ ಈಗಾಗಲೇ ಇರುವ ಖಾತೆಯ ಮೂಲಕವೂ ಹೆಸರು ನೋಂದಣಿ ಮಾಡಬಹುದಾಗಿದೆ.
ಭಾನುವಾರ ಸಂಜೆ 7:50ರ ವರೆಗೂ 6.35 ಲಕ್ಷ ಮಕ್ಕಳು ಕೋವಿನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.