ನವದೆಹಲಿ: ಜನಧನ ಯೋಜನೆಯಡಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮೊತ್ತ 1.5 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಂಕಿಅಂಶ ತಿಳಿಸಿದೆ. ಕೇಂದ್ರ ಸರ್ಕಾರ ಸುಮಾರು ಏಳೂವರೆ ವರ್ಷದ ಹಿಂದೆ ಈ ಯೋಜನೆಯನ್ನು ಆರಂಭಿಸಿತ್ತು.
ರುಪೇ ಡೆಬಿಟ್ ಕಾರ್ಡ್: 31.28 ಕೋಟಿ ಪಿಎಂಜೆಡಿವೈ ಫಲಾನುಭವಿಗಳಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗಿದೆ. ರುಪೇ ಕಾರ್ಡ್ಗಳ ಸಂಖ್ಯೆ ಹಾಗೂ ಅದರ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.
ಉದ್ದೇಶ ಏನು?: ಕೈಗೆಟಕುವ ದರದಲ್ಲಿ ಹಣಕಾಸು ಉತ್ಪನ್ನಗಳು, ಸೇವೆಗಳು ಜನರಿಗೆ ಲಭ್ಯ ವಾಗುವುದನ್ನು ಖಾತರಿಪಡಿಸುವುದು ಸರ್ಕಾ ರದ ಈ ಮಹತ್ವದ ಯೋಜನೆಯ ಉದ್ದೇಶ.
24.61 ಕೋಟಿ ಮಹಿಳೆಯರು: ಒಟ್ಟು ಖಾತೆಗಳಲ್ಲಿ ಸುಮಾರು 24.61 ಕೋಟಿ ಖಾತೆದಾರರು ಮಹಿಳೆಯರಾಗಿದ್ದಾರೆ. ಯೋಜನೆಯ ಮೊದಲ ವರ್ಷ 17.90 ಕೋಟಿ ಖಾತೆಗಳನ್ನು ತೆರೆಯಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾರ್ಗಸೂಚಿ ಪ್ರಕಾರ, ಜನ ಧನ್ ಖಾತೆ ಸಹಿತ ಮೂಲ ಉಳಿತಾಯ ಬ್ಯಾಂಕ್ ಠೇವಣಿ (ಬಿಎಸ್ಬಿಡಿ) ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಿಸಬೇಕೆಂದಿಲ್ಲ. ಜನ ಧನ್ ಖಾತೆದಾರರ ವ್ಯವಹಾರಗಳನ್ನು ಆಧರಿಸಿ ಪ್ರತಿ ದಿನವೂ ಖಾತೆಯಲ್ಲಿನ ಮೊತ್ತದಲ್ಲಿ ಏರುಪೇರಾಗಬಹುದು. ಕೆಲವು ದಿನ ಖಾತೆಯಲ್ಲಿ ಹಣವೇ ಉಳಿಯದಿರಬಹುದು. ಅದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಯಾವ ಬ್ಯಾಂಕಲ್ಲಿ ಎಷ್ಟು ಖಾತೆ?
- ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು 34.9 ಕೋಟಿ ಖಾತೆ.
- ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು 8.05 ಕೋಟಿ ಖಾತೆ.
- ಖಾಸಗಿ ವಲಯದ ಬ್ಯಾಂಕ್ಗಳು 1.28 ಖಾತೆ.
- ಗ್ರಾಮೀಣ ಹಾಗೂ ಅರೆ-ನಗರ ಬ್ಯಾಂಕ್ ಶಾಖೆಗಳá- 29.54 ಕೋಟಿ ಖಾತೆ.