ಔರಂಗಾಬಾದ್, ಮಹಾರಾಷ್ಟ್ರ: ಆರೋಗ್ಯ ಮೂಲಸೌಕರ್ಯ ಬಲಪಡಿಸಲು ದೇಶದಲ್ಲಿ 157 ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಈ ಯೋಜನೆಗಳಿಗೆ ಕೆಲವು ರಾಜ್ಯಗಳಲ್ಲಿ ಭೂಮಿ ಅಲಭ್ಯದಂತಹ ಸಮಸ್ಯೆ ಉಂಟಾಗಲಿದೆ ಎಂದು ಕೇಂದ್ರ ಸಚಿವೆ ಭಾರತಿ ಪವಾರ್ ಹೇಳಿದ್ದಾರೆ.

'ಹಿಂದುಳಿದ ಜಿಲ್ಲೆಗಳಲ್ಲಿ ಆರೋಗ್ಯ ಮೂಲಸೌಲಭ್ಯ ಹೆಚ್ಚಿಸುವುದು ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದ್ದು ಅದಕ್ಕಾಗಿ ನಾವು 157 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುತ್ತಿದ್ದೇವೆ. ದೇಶದಲ್ಲಿನ 6 ಏಮ್ಸ್ ವೈದ್ಯಕೀಯ ಸಂಸ್ಥೆಗಳನ್ನು 22ಕ್ಕೆ ಹೆಚ್ಚಿಸಲಾಗುವುದು. ಆದರೆ ಈ ಯೋಜನೆಗಳು ಕೆಲವು ರಾಜ್ಯಗಳಲ್ಲಿ ಭೂಮಿ ಲಭ್ಯತೆಯ ಸಮಸ್ಯೆ ಎದುರಿಸುತ್ತಿದ್ದು ಅಲ್ಲಿ ಯೋಜನೆಯು ಮುಂದಡಿಯಿಟ್ಟಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಈ ಸಮಸ್ಯೆಯಿಲ್ಲ' ಎಂದು ಅವರು ಶುಕ್ರವಾರ ರಾತ್ರಿ ಔರಂಗಾಬಾದ್‌ನಲ್ಲಿ ಪಿಟಿಐಗೆ ಹೇಳಿದರು.
ಕೋವಿಡ್‌ನ ಈ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.