HEALTH TIPS

ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ರೈಲು: ಮೂವರ ಸಾವು, 15 ಜನರಿಗೆ ಗಾಯ

        ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜಸ್ಥಾನದಿಂದ ಹೊರಟಿದ್ದ ಗುವಾಹಟಿ ಬಿಕಾನೇರ್ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ್ದು, ದೊಡ್ಡ ಅನಾಹುತ ಸಂಭವಿಸಿದೆ.

        ಉತ್ತರ ಬಂಗಾಳದ ಕೂಚ್ ಬೆಹಾರ್ ಮತ್ತು ಜಲ್ಪೈಗುರಿ ನಡುವೆ ಡೊಮೊಹಾನಿ ಬಳಿಯ ಮೇನಾಗೊರಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

        ಗುವಾಹಟಿಗೆ ಹೊರಟಿದ್ದ ಬಿಕಾನೆರ್ ಎಕ್ಸ್‌ಪ್ರೆಸ್‌ನ 4-5 ಬೋಗಿಗಳು ಹಳಿತಪ್ಪಿವೆ. ಸ್ಥಳದಲ್ಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಪಲ್ಟಿಯಾದ ಬೋಗಿಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. 

           ರೈಲು ಸಂಖ್ಯೆ 15633 ಬಿಕಾನೇರ್ ಎಕ್ಸ್‌ಪ್ರೆಸ್ ಮಂಗಳವಾರ ರಾತ್ರಿ ರಾಜಸ್ಥಾನದಿಂದ ಹೊರಟು ಗುರುವಾರ ಬೆಳಗ್ಗೆ 5.44ಕ್ಕೆ ಪಾಟ್ನಾ ರೈಲು ನಿಲ್ದಾಣಕ್ಕೆ ಆಗಮಿಸಿತ್ತು. ಬಳಿಕ ಮಧ್ಯಾಹ್ನ 2 ಗಂಟೆಗೆ ಕಿಶನ್‌ಗಂಜ್ ತಲುಪಿ ಅಲ್ಲಿಂದ ಗುವಾಹಟಿಗೆ ಹೊರಟಾಗ ಜುಲ್ಪೈಗುರಿ ಬಳಿ ಹಳಿತಪ್ಪಿದೆ. 

           ಸಾರ್ವಜನಿಕರಿಗೆ ತುರ್ತು ಮಾಹಿತಿಗಾಗಿ ಭಾರತೀಯ ರೈಲ್ವೇ ಸಹಾಯವಾಣಿ ಸಂಖ್ಯೆ 8134054999, 03612731622, 03612731623 ಅನ್ನು ಬಿಡುಗಡೆ ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries