ಕಾಸರಗೋಡು: ತೆರಿಗೆ ವಂಚಿಸಿ ಅಕ್ರಮವಾಗಿ ಸಾಗಿಸುತ್ತಿದ್ದ 1.5 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಾಸರಗೋಡಲ್ಲಿ ಕಸ್ಟಮ್ಸ್ ವಶಪಡಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಮೂಲದವರನ್ನು ವಶಕ್ಕೆ ಪಡೆಯಲಾಗಿದೆ. ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಚಂದ್ರಗಿರಿ ಸೇತುವೆ ಬಳಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಕೋಝಿಕ್ಕೋಡ್ ಪ್ರದೇಶದಿಂದ ಬರುತ್ತಿದ್ದ ಕಾರಿನಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದರು. ಗುಪ್ತಚರ ಮಾಹಿತಿ ಮೇರೆಗೆ ಕಸ್ಟಮ್ಸ್ 3.11 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಕಸ್ಟಮ್ಸ್ ಅಧೀಕ್ಷಕ ಪಿ.ಪಿ. ರಾಜೀವ್ ಮತ್ತು ಮುಖ್ಯ ಹವಾಲ್ದಾರರಾದ ಕೆ. ಚಂದ್ರಶೇಖರ, ಕೆ. ಆನಂದ, ಎಂ. ವಿಶ್ವನಾಥ ನೇತೃತ್ವ ವಹಿಸಿದ್ದರು.