HEALTH TIPS

ಕೇರಳದಲ್ಲಿ ಕೊರೊನಾ ಅಬ್ಬರ; ಇಂದು 18,123 ಮಂದಿಗೆ ಕೋವಿಡ್ ಪತ್ತೆ: ಎರಡು ಜಿಲ್ಲೆಗಳಲ್ಲಿ 3,000ಕ್ಕೂ ಹೆಚ್ಚು ಸೋಂಕಿತರು: ಟಿ.ಪಿ.ಆರ್. 30.55 ಶೇ.

                                               

              ತಿರುವನಂತಪುರ: ರಾಜ್ಯದಲ್ಲಿ ಇಂದು 18,123 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಿರುವನಂತಪುರ 3917, ಎರ್ನಾಕುಳಂ 3204, ತ್ರಿಶ್ಶೂರ್ 1700, ಕೋಝಿಕ್ಕೋಡ್ 1643, ಕೊಟ್ಟಾಯಂ 1377, ಪತ್ತನಂತಿಟ್ಟ 999, ಕೊಲ್ಲಂ 998, ಪಾಲಕ್ಕಾಡ್ 889, ಮಲಪ್ಪುರಂ 821, ಆಲಪ್ಪುಳ 715, ಕಣ್ಣೂರು 649, ಇಡುಕ್ಕಿ 594, ವಯನಾಡ್ 318, ಕಾಸರಗೋಡು 299 ಎಂಬಂತೆ ಸೋಂಕು ದೃಢಪಟ್ಟಿದೆ.

               ಕಳೆದ 24 ಗಂಟೆಗಳಲ್ಲಿ 59,314 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತ  10 ಕ್ಕಿಂತ ಹೆಚ್ಚಿನ 5 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 6 ವಾರ್ಡ್‍ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.

                    ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,17,670 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 2,13,251 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 4,419 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 528 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 1,03,864 ಕೊರೋನಾ ಪ್ರಕರಣಗಳಲ್ಲಿ, ಕೇವಲ 4 ಶೇ ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

              ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 8 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 150 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 50,832ಕ್ಕೆ ಏರಿಕೆಯಾಗಿದೆ. 

               ಇಂದು, ಸೋಂಕು ಪತ್ತೆಯಾದವರಲ್ಲಿ 113 ಮಂದಿ ಜನರು ಹೊರ ರಾಜ್ಯದವರು. ಸಂಪರ್ಕದ ಮೂಲಕ 17,627 ಮಂದಿ ಜನರು ಸೋಂಕಿಗೆ ಒಳಗಾಗಿದ್ದಾರೆ. ಸಂಪರ್ಕದ ಮೂಲ 234 ಮಂದಿಗೆ ಸೋಂಕು ಬಾಧಿಸಿದೆ. ಒಟ್ಟು 149 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಇಂದು ಕೋವಿಡ್ ದೃಢಪಟ್ಟಿದೆ. 

                   ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4749 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 511, ಕೊಲ್ಲಂ 29, ಪತ್ತನಂತಿಟ್ಟ 476, ಆಲಪ್ಪುಳ 217, ಕೊಟ್ಟಾಯಂ 305, ಇಡುಕ್ಕಿ 128, ಎರ್ನಾಕುಳಂ 1492, ತ್ರಿಶೂರ್ 276, ಪಾಲಕ್ಕಾಡ್ 248, ಮಲಪ್ಪುರಂ 135, ಕೋಝಿಕ್ಕೋಡ್ 415, ವಯನಾಡ್ 125, ಕಣ್ಣೂರು 289, ಕಾಸರಗೋಡು 103 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,03,864 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 52,23,430 ಮಂದಿ ಜನರು ಕೊರೊನಾದಿಂದ ಮುಕ್ತರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries