ಡೆಹ್ರಾಡೂನ್: ದೇಶಾದ್ಯಂತ ಕೋವಿಡ್ -19 ಮತ್ತು ಒಮೈಕ್ರಾನ್ ರೂಪಾಂತರ ನಿರಂತರವಾಗಿ ಹರಡುತ್ತಿರುವ ಕಾರಣ ಹರಿದ್ವಾರದ ಗಂಗಾ ನದಿಯಲ್ಲಿ ಜನವರಿ 14ರ ಮಕರ ಸಂಕ್ರಾಂತಿಯಂದು ಭಕ್ತರ ಪವಿತ್ರ ಸ್ನಾನಕ್ಕೂ ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧ ಹೇರಿದೆ.
ಉತ್ತರಾಖಂಡ ಸರ್ಕಾರವು ಮಕರ ಸಂಕ್ರಾಂತಿಗಾಗಿ ಹರಿದ್ವಾರದಲ್ಲಿ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೊಳಿಸಿದ್ದು, “ಹರ್ ಕಿ ಪೌರಿ’ ಪ್ರದೇಶಕ್ಕೂ ಪ್ರವೇಶ ನಿರ್ಬಂಧಿಸಿದೆ. ಇನ್ನು ಜನವರಿ 14ರ ರಾತ್ರಿ 10 ರಿಂದ ಜನವರಿ ಬೆಳಿಗ್ಗೆ 6 ರವರೆಗೆ ರಾತ್ರಿ ಕಫ್ರ್ಯೂ ವಿಧಿಸಲಾಗುವುದು ಎಂದು ಹರಿದ್ವಾರದ ಡಿಎಂ ವಿನಯ್ ಶಂಕರ್ ಪಾಂಡೆ ಹೇಳಿದರು.
ಮಂಗಳವಾರ, ಭಾರತದಲ್ಲಿ 1,68,063 ಹೊಸ ಕರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 3,58,75,790ಕ್ಕೆ ತಲುಪಿದೆ, ಇದರಲ್ಲಿ ಒಮೈಕ್ರಾನ್ ರೂಪಾಂತರ ಪ್ರಕರಣಗಳು 4,461 ಇದೆ.