ನವದೆಹಲಿ: ದೇಶಾದ್ಯಂತ ಕೊರೋನಾ ಸಾಂಕ್ರಾಮಿಕ ಅಟ್ಟಹಾಸ ಮರೆಯುತ್ತಿರುವಂತೆಯೇ ಇಲ್ಲೊಂದು ಅಚ್ಚರಿ ಮತ್ತು ನೆಮ್ಮದಿಯ ಸುದ್ದಿ ಹೊರಬಿದಿದ್ದು, ಸಾಮಾನ್ಯ ಶೀತ ಮತ್ತು ಕೆಮ್ಮು ಸಮಸ್ಯೆಗಳು ಕೋವಿಡ್-19 ವಿರುದ್ಧ ಹೋರಾಡುವ ಬಲ ನೀಡಲಿದೆ ಎಂಬ ಅಂಶವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಜಗತ್ತಿನಾದ್ಯಂತ ಓಮಿಕ್ರಾನ್ ಸೋಂಕು ವ್ಯಾಪಕವಾದಿ ಪ್ರಸರಣವಾಗುತ್ತಿದ್ದು, ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ನಂತರ ದೈತ್ಯ ದೇಶಗಳೇ ಸೋಂಕು ನಿಯಂತ್ರಿಸಲು ಪರದಾಡುತ್ತಿವೆ. ಪ್ರಮುಖವಾಗಿ ಜಗತ್ತಿನ ಸರ್ವಶ್ರೇಷ್ಛ ವೈದ್ಯಕೀಯ ಮೂಲಸೌಕರ್ಯ ಹೊಂದಿರುವ ಅಮೆರಿಕದಲ್ಲೇ ನಿತ್ಯ 11ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ.
ಹೀಗಾಗಿ ಎಲ್ಲೆಡೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದರ ನಡುವೆಯೇ ಇತ್ತೀಚೆಗೆ ನಡೆಸಲಾಗಿರುವ ಅಧ್ಯಯನವೊಂದು ಶೀತದಿಂದ (Common Coughs) ಕೊರೊನಾ -19ರ ವಿರುದ್ಧ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಬಹಿರಂಗಪಡಿಸಿದೆ.
ಕೊರೊನಾ ವಿರುದ್ಧ ಶೀತ ಕೆಮ್ಮಿನಿಂದ 'ರಕ್ಷಣಾತ್ಮಕ ಗುರಾಣಿ'
ನ್ಯೂಸ್ ಮೆಡಿಕಲ್ ಲೈಫ್ ಸೈನ್ಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ಕೆಮ್ಮು ಮತ್ತು ಶೀತವು ಟಿ-ಕೋಶಗಳನ್ನು ಉತ್ತೇಜಿಸುತ್ತವೆ ಎನ್ನಲಾಗಿದೆ. ಅಂದರೆ ರಕ್ತ ಕಣಗಳು ವೈರಸ್‌ಗಳನ್ನು ಪತ್ತೆಹಚ್ಚುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಇದಲ್ಲದೆ, ಕೋವಿಡ್‌ನಲ್ಲಿ ವಾಸನೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಮೂಲಕ ನಮ್ಮ ರೋಗನಿರೋಧಕ ಶಕ್ತಿಯು ಬಲಗೊಳ್ಳುವಂತೆ ಮಾಡುತ್ತದೆ ಎನ್ನಲಾಗಿದೆ. ಲಸಿಕೆ ಪರಿಣಾಮಕಾರಿ
ಕನಿಷ್ಠ 4 ಇತರ ರೀತಿಯ ಕೊರೋನಾ ವೈರಸ್‌ಗಳು ಸಾಮಾನ್ಯವಾಗಿ ಯಾವುದೇ ವ್ಯಕ್ತಿಗೆ ಸೋಂಕು ತರುತ್ತವೆ. ಇಂತಹ ವೈರಸ್ ಸೋಂಕಿಗೆ ಒಳಗಾದ ಪ್ರತಿ ಐವರಲ್ಲಿ ಒಬ್ಬರು ಶೀತವನ್ನು ಹೊಂದಿದ್ದಾರೆ. ತಮ್ಮ ದೇಹದಲ್ಲಿ T-ಸೆಲ್ ಗಳನ್ನು ಹೊಂದಿರುವವರು ಎಲ್ಲಾ ಕೊರೊನಾವೈರಸ್‌ಗಳ ವಿರುದ್ಧ ಒಂದೇ ಪ್ರಭಾವ ತೋರಿಸಿದೆ ಎಂದು ಅಧ್ಯಯನವು ಕಂಡುಹಿಡಿದಿದೆ, ಇದು ಇತರ ವೈರಸ್‌ಗಳ ವಿರುದ್ಧ ಬಗ್ ರೀತಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ದೇಹವನ್ನು ಪ್ರವೇಶಿಸದಂತೆ ತಡೆಯುತ್ತದೆ. ಕೊರೋನಾ ವೈರಸ್ ಅನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಲಸಿಕೆ ಮತ್ತು ಪ್ರತಿಯೊಬ್ಬರೂ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವಾಗಿದೆ, ಜೊತೆಗೆ ಬೂಸ್ಟರ್ ಡೋಸ್ ಅನ್ನು ಸಹ ಅವರು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.