ಉಪ್ಪಳ: ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾರ್ಷಿಕ ಮಹೋತ್ಸವ ಅಂಗವಾಗಿ ಭಾವೈಕ್ಯದ ಭಾನುವಾರ ಆಚರಿಸಲಾಯಿತು. ಇದರ ಅಂಗವಾಗಿ ಭಾನುವಾರ ಪರಮಪ್ರಸಾದದ ಮೆರವಣಿಗೆ ನಡೆಯಿತು.
ಬೇಳ ಸೈ0ಟ್ ಮೇರಿಸ್ ಕಾಲೇಜಿನ ಪ್ರಾಂಶುಪಾಲ ಫಾದರ್ ಅನಿಲ್ ಅವಿಲ್ಡ್ ಲೋಬೊ ಬಲಿಪೂಜೆ ಮತ್ತು ಆಶೀರ್ವಚನ ನೀಡಿದರು. ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ಹ್ಯಾರಿ ಡಿ ಸೋಜ ಉಪಸ್ಥಿತರಿದ್ದು, ಬಲಿಪೂಜೆಗೆ ನೇತೃತ್ವ ನೀಡಿದರು. ಈ ಸಂದರ್ಭದಲ್ಲಿ ಪರಮಪ್ರಸಾದದ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಪಾಲನಾ ಸಮಿತಿ ಉಪಾಧ್ಯಕ್ಷ ಜೋರ್ಜ್ ಡಿ ಅಲ್ಮೇಡಾ, ರೋಶನ್ ಡಿ ಸೋಜ ಹಾಗೂ ಪಾಲನಾ ಸಮಿತಿ ಸದಸ್ಯರು ನೇತೃತ್ವ ನೀಡಿದರು.
ವಾರ್ಷಿಕ ಮಹೋತ್ಸವ ಜನವರಿ 19 ರಂದು ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಪವಿತ್ರ ಮೊಂಬತ್ತಿ ವಿತರಣೆ ನಡೆಯಲಿದೆ. 10 ಗಂಟೆಗೆ ದಿವ್ಯಬಲಿಪೂಜೆ ಜರಗಲಿದೆ.