ನವದೆಹಲಿ: ಬಿಟ್ ಕಾಯಿನ್ ಹಾಗೂ ಇತರ ಡಿಜಿಟಲ್ ಕ್ರಿಪ್ಟೋಕರೆನ್ಸಿಗಳು ತೀವ್ರ ಕುಸಿತ ಕಂಡ ಪರಿಣಾಮ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಮೌಲ್ಯ ತೀವ್ರವಾಗಿ ಕುಸಿತ ಕಂಡಿದೆ.
ಬಿಟ್ ಕಾಯಿನ್ ನ ಮೌಲ್ಯ ಪ್ರತಿ ಕಾಯಿನ್ ಗೆ 35,000 ಡಾಲರ್ ನಷ್ಟಿದ್ದು, ನವೆಂಬರ್ 2021 ನಿಂದ ಏರಿಕೆ ಕಂಡ ಬಳಿಕ ಇದೇ ಮೊದಲ ಬಾರಿಗೆ ಶೇ.40 ಕ್ಕಿಂತಲೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ನವೆಂಬರ್ ನಲ್ಲಿ ಬಿಟ್ ಕಾಯಿನ್ ಮೌಲ್ಯ 69,000 ಡಾಲರ್ ಆಸುಪಾಸಿನಲ್ಲಿತ್ತು ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಅಮೆರಿಕಾದ ಫೆಡರಲ್ ರಿಸರ್ವ್ ಮಾರ್ಚ್ ನಲ್ಲಿ ಬಡ್ಡಿ ದರ ಏರಿಕೆ ಸುಳಿವು ನೀಡಿದ್ದು ಮಾರುಕಟ್ಟೆಯಿಂದ ಉತ್ತೇಜನಗಳನ್ನು ಹಿಂಪಡೆಯುವ ಸುಳಿವು ನೀಡಿದ ಬೆನ್ನಲ್ಲೇ ಕ್ರಿಪ್ಟೋ ಕುಸಿತ ದಾಖಲಾಗಿದೆ. ಇತರ ಡಿಜಿಟಲ್ ಕರೆನ್ಸಿಗಳಾದ ಎಥೆರಿಯಮ್, ಫೈನಾನ್ಸ್ ಕಾಯಿನ್, ಕಾರ್ಡಾನೊಗಳೂ ಕುಸಿತ ಕಂಡಿದೆ. ಸೋಲಾನಾ, ಡೊಗೆಕೋಯಿನ್ ಮತ್ತು ಶಿಬಾ ಇನು ಸಹ ಕುಸಿತ ದಾಖಲಿಸಿದೆ.
ನವೆಂಬರ್ ನಿಂದ ದಾಖಲಾಗಿರುವ ಕುಸಿತದಲ್ಲಿ ಬಿಟ್ ಕಾಯಿನ್ ನ ಮಾರುಕಟ್ಟೆಯಲ್ಲಿ 600 ಬಿಲಿಯನ್ ಡಾಲರ್ ನಷ್ಟ ಉಂಟಾಗಿದೆ.