ಬದಿಯಡ್ಕ: ದೇವರಕೆರೆ ಮೇಗಿನಡ್ಕದ ಶ್ರೀರಕ್ತೇಶ|ವರಿ ಮತ್ತು ಪರಿವಾರ ದೈವಗಳ 9ನೇ ವರ್ಷದ ಪ್ರತಿಷ್ಠಾ ಮಹೋತ್ಸವ, ದೈವಗಳ ಕೋಲ ಮತ್ತು ದೇವರುಗಳ ಆರಾಧನೆ ಫೆ. 1 ಹಾಗೂ 2 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಫೆ.1 ರಂದು ಬೆಳಿಗ್ಗೆ 6ಕ್ಕೆ ಗಣಪತಿಹವನ, 9.30 ಕ್ಕೆ ದೇವತಾ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರರ ದಿವ್ಯಹಸ್ತದಿಂದ ಶ್ರೀರಕ್ತೇಶ್ವರಿ ಮತ್ತು ಪರಿವಾರ ದೇವರುಗಳ ತಂಬಿಲ ಸೇವೆ ನಡೆಯಲಿದೆ. 11 ಕ್ಕೆ ಪ್ರಸಾದ ವಿತರಣೆ, ಮಧ್ಯಾಹ್ನ 1 ರಿಂದ ಸಾರ್ವಜನಿಕ ಅನ್ನದಾನ ನಡೆಯಲಿದೆ. ಸಂಜೆ 7ಕ್ಕೆ ಮಾನ್ಯ ಪಡುಮನೆ ಭಂಡಾರದ ಮನೆಯಿಂದ ಶ್ರೀವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ರಾತ್ರಿ 8.30ಕ್ಕೆ ದೈವದ ತೊಡಂಙಲ್, ರಾತ್ರಿ 9ಕ್ಕೆ ಪ್ರಸಾದ ಭೋಜನ ನಡೆಯಲಿದೆ.
ಫೆ.2 ರಂದು ಬೆಳಿಗ್ಗೆ 7ಕ್ಕೆ ಶ್ರೀವಿಷ್ಣುಮೂರ್ತಿ, ವಯನಾಟ್ ಕುಲವನ್ ದೈವಸ್ಥಾನ ಅರ್ತಲೆ ಕಲ್ಲಕಟ್ಟದಿಂದ ಶ್ರೀಕಾಲಿಚ್ಚಾನ್ ದೈವದ ಭಂಡಾರ ಆಗಮನ, 10ಕ್ಕೆ ಶ್ರೀವಿಷ್ಣುಮೂರ್ತಿ ದೈವದ ಕೋಲ, ಕಾಲಿಚ್ಚಾನ್ ದೈವದ ಕೋಲ ನಡೆಯಲಿದೆ. 11 ಕ್ಕೆ ಶ್ರೀವಿಷ್ಣುಮೂರ್ತಿ ದೈವದ ಬಾರಣೆ, 12ಕ್ಕೆ ಶ್ರೀದೈವದ ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1 ಕ್ಕೆ ಸಾರ್ವಜನಿಕ ಅನ್ನದಾನ ನಡೆಯಲಿದೆ. 3 ರಿಂದ ಶ್ರೀಮಂತ್ರವಾದಿ ಗುಳಿಗ ದೈವದ ಕೋಲ, ಸಂಜೆ 4.30ಕ್ಕೆ ವಿಳಕ್ಕಿರಿಯಲ್, 5ಕ್ಕೆ ಶ್ರೀದೈವಗಳ ಭಂಡಾರ ನಿರ್ಗಮನದೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ.