HEALTH TIPS

ಗಾಳಿಯಲ್ಲಿ ಕೊರೊನಾ ವೈರಾಣು 20 ನಿಮಿಷಗಳಲ್ಲಿ ಶೇ. 90ರಷ್ಟು ಹರಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ: ಅಧ್ಯಯನ ವರದಿ

          ಲಂಡನ್: ಗಾಳಿಯಲ್ಲಿ ಕೊರೊನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವ ಸಾಮರ್ಥ್ಯವನ್ನು ಬೇಗನೆ ಕಳೆದುಕೊಳ್ಳುತ್ತದೆ ಎಂದು ನೂತನ ಅಧ್ಯಯನ ವರದಿ ತಿಳಿಸಿದೆ. ಗಾಳಿಯಲ್ಲಿ 20 ನಿಮಿಷಗಳಿಗೂ ಹೆಚ್ಚು ಕಾಲ ಇದ್ದರೆ ಶೇ.90ರಷ್ಟು ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎನ್ನುವುದನ್ನು ವರದಿ ಬಹಿರಂಗ ಪಡಿಸಿದೆ.

            ಗಾಳಿಯಲ್ಲಿ ಮೊದಲ 5 ನಿಮಿಷಗಳಲ್ಲಿಯೇ ಹೆಚ್ಚಿನ ಶಕ್ತಿಯನ್ನು ಕೊರೊನಾ ವೈರಾಣು ಕಳೆದುಕೊಳ್ಳುತ್ತದೆ. ವೆಂಟಿಲೇಷನ್ ಚೆನ್ನಾಗಿದ್ದ ಸ್ಥಳದಲ್ಲಿ ಕೊರೊನಾ ವೈರಾಣು ಹರಡುವ ಸಾಧ್ಯತ್ರೆ ತುಂಬಾ ಕಡಿಮೆ, ಮುಚ್ಚಿದ್ದ ಸ್ಥಳಗಳಲ್ಲಿ ಕೊರೊನಾ ವೈರಾಣು ಬೇಗನೆ ಹರಡುತ್ತದೆ ಎನ್ನುವ ಸಂಗತಿಯನ್ನು ಹೊಸ ಅಧ್ಯಯನ ದೃಢಪಡಿಸಿದೆ.

           ಇಂಗ್ಲೆಂಡಿನ ಬ್ರಿಸ್ಟಾಲ್ ವಿವಿ ಸಂಶೋಧಕರು ಈ ಅಧ್ಯಯನದ ರೂವಾರಿಗಳು. ಗಾಳಿಯಲ್ಲಿ ಕೊರೊನಾ ವೈರಾಣು ಎಷ್ಟು ಕಾಲ ಕಾರ್ಯಶೀಲವಾಗಿರುತ್ತದೆ ಎನ್ನುವ ಸಂಶೋಧನೆಯಲ್ಲಿ ಸಂಶೋಧಕರ ತಂಡ ನಿರತವಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries