ಸೂರತ್: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಾಸಾಯನಿಕ ಅನಿಲ ತುಂಬಿದ್ದ ಟ್ಯಾಂಕರ್ ಸೋರಿಕೆಯಾಗಿ ಆರು ಮಂದಿ ಉಸಿರು ಕಟ್ಟಿ ಮೃತಪಟ್ಟು, 20ಕ್ಕೂ ಅಧಿಕ ಮಂದಿ ಅಸ್ವಸ್ಥ. ಗೊಂಡಿರುವ ಘಟನೆ ಸೂರತ್ ನಲ್ಲಿ ಗುರುವಾರ ನಸುಕಿನ ಜಾವ ನಡೆದಿದೆ.
ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿ ಐ ಡಿ ಸಿ(GICD) ಯ ರಾಜ ಕಮಲ್ ಚಿಕ್ಕಡಿ ಫ್ಲಾಟ್ ನಂ.362ರ ಹೊರಗೆ ನಿಂತಿದ್ದ ರಾಸಾಯನಿಕ ಅನಿಲ ಟ್ಯಾಂಕರ್ ಸಮೀಪದಲ್ಲಿಯೇ ಎಲ್ಲ ಕಾರ್ಮಿಕರು ಮಲಗಿದ್ದರು. ಏಕಾಏಕಿ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿದ್ದು, ಇದರಿಂದ ಮಲಗಿದ್ದ ಕಾರ್ಮಿಕರು ಹಾಗೂ ಸಮೀಪದ ಕಾರ್ಖಾನೆಯ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ. ಆರು ಮಂದಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Gujarat: Six people died and 20 others were admitted to the civil hospital after gas leakage at a company in Sachin GIDC area of Surat early morning today, says hospital's In Charge Superintendent, Dr Omkar Chaudhary