HEALTH TIPS

2000ರ ಬಳಿಕ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಸಂಭವಿಸಿದ ಪ್ರಮುಖ ಕಾಲ್ತುಳಿತ ದುರಂತಗಳು

           ನವದೆಹಲಿ: ಭಾರತದಲ್ಲಿ ಹಿಂದೂ ಧಾರ್ಮಿಕ ಪ್ರದೇಶಗಳಲ್ಲಿ ಕಾಲ್ತುಳಿತದ ಅವಘಡಗಳು ಪದೇ ಪದೇ ಸಂಭವಿಸುತ್ತಲೇ ಇವೆ. ಮಂದಿರಗಳು ಸೇರಿದಂತೆ ವಿವಿಧ ಧಾರ್ಮಿಕ ಪ್ರದೇಶಗಳಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಇದುವರೆಗೆ ನೂರಾರು ಮಂದಿ ಮೃತಪಟ್ಟಿದ್ದಾರೆ.

             2022 ಹೊಸ ವರ್ಷದಂದು ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಭಕ್ತರ ನೂಕು ನುಗ್ಗಲಿನ ವೇಳೆ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 12 ಜನರು ಮೃತಪಟ್ಟಿದ್ದು, 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

             2000ನೇ ಇಸವಿಯ ಬಳಿಕ ದೇಶದಲ್ಲಿ ಸಂಭವಿಸಿದ ಪ್ರಮುಖ ಕಾಲ್ತುಳಿತದ ದುರಂತಗಳ ಪಟ್ಟಿ ಇಲ್ಲಿ ಕೊಡಲಾಗಿದೆ.

2003:

2003 ಆಗಸ್ಟ್ 27ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದ ಕುಂಭಮೇಳದಲ್ಲಿ ಪವಿತ್ರ ಸ್ನಾನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 39 ಜನರು ಸಾವಿಗೀಡಾದರು. ಘಟನೆಯಲ್ಲಿ ಸುಮಾರು 140 ಮಂದಿ ಗಾಯಗೊಂಡಿದ್ದರು.

2005:
2005 ಜನವರಿ 25ರಂದು ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಂದಾರ ದೇವಿ ಮಂದಿರದ ವಾರ್ಷಿಕ ತೀರ್ಥಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 340ಕ್ಕೂ ಹೆಚ್ಚು ಭಕ್ತರು ಮೃತಪಟ್ಟಿದ್ದರು. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದರು. ಮೆಟ್ಟಿಲಿನಲ್ಲಿ ಭಕ್ತರು ತೆಂಗಿನಕಾಯಿ ಒಡೆಯುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಕೆಳಗೆ ಬಿದ್ದಿದ್ದರಿಂದ ಅವಘಡ ಸಂಭವಿಸಿತ್ತು.

2008:
2008 ಆಗಸ್ಟ್ 3ರಂದು ಹಿಮಾಚಲ ಪ್ರದೇಶದ ಬಿಸ್ಲಾಪುರ ಜಿಲ್ಲೆಯ ನೈನಾ ದೇವಿ ಮಂದಿರದಲ್ಲಿ ಬಂಡೆ ಕುಸಿತದ ವದಂತಿಯಿಂದ ಉಂಟಾದ ಕಾಲ್ತುಳಿತದಲ್ಲಿ 162 ಮಂದಿ ಸಾವಿಗೀಡಾದರು. ಘಟನೆಯಲ್ಲಿ 47 ಮಂದಿ ಗಾಯಗೊಂಡಿದ್ದರು.

2008:
2008 ಸೆಪ್ಟೆಂಬರ್ 30ರಂದು ರಾಜಸ್ಥಾನದ ಜೋಧ್‌ಪುರದ ಚಾಮುಂಡಾ ದೇವಿ ಮಂದಿರದಲ್ಲಿ ಬಾಂಬ್ ಸ್ಫೋಟವಾಗುತ್ತಿದೆ ಎಂಬ ವದಂತಿಯಿಂದ ಉಂಟಾದ ಕಾಲ್ತುಳಿತದಲ್ಲಿ ಸುಮಾರು 250 ಭಕ್ತರು ಮೃತಪಟ್ಟಿದ್ದರು. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

2010:
2010 ಮಾರ್ಚ್ 4ರಂದು ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯ ಕೃಪಾಲು ಮಹಾರಾಜನ ರಾಮ್ ಜಾನಕಿ ದೇವಸ್ಥಾನದಲ್ಲಿ ಸ್ವಯಂಘೋಷಿತ ದೇವಮಾನವನಿಂದ ಉಚಿತ ಬಟ್ಟೆ ಮತ್ತು ಆಹಾರವನ್ನು ಪಡೆಯಲು ಜನರು ಮುಗಿಬಿದ್ದ ಪರಿಣಾಮ ಉಂಟಾದ ಕಾಲ್ತುಳಿತದಲ್ಲಿ ಸುಮಾರು 63 ಜನರು ಮೃತಪಟ್ಟಿದ್ದರು.

2011:
2011 ನವೆಂಬರ್ 8ರಂದು ಹರಿದ್ವಾರದ ಗಂಗಾ ನದಿಯ ತಟದಲ್ಲಿರುವ ಹರ್-ಕಿ-ಪೌರಿ ಘಾಟ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 20 ಮಂದಿ ಸಾವಿಗೀಡಾಗಿದರು.

2012:
2012 ನವೆಂಬರ್ 19ರಂದು ಪಟ್ನಾದ ಗಂಗಾ ನಂದಿ ದಡದಲ್ಲಿರುವ ಅದಾಲತ್ ಘಾಟ್‌ನಲ್ಲಿ ಛಟ್ ಪೂಜೆಯ ವೇಳೆ ಉಂಟಾದ ನೂಕುನುಗ್ಗಲಿನ ವೇಳೆ ತಾತ್ಕಾಲಿಕ ಸೇತುವೆಯೊಂದು ಕುಸಿದು ಉಂಟಾದ ಕಾಲ್ತುಳಿತದಲ್ಲಿ 20 ಮಂದಿ ಮೃತಪಟ್ಟಿದ್ದರಲ್ಲದೆ ಹಲವರು ಗಾಯಗೊಂಡಿದ್ದರು.

2013:
2013 ಅಕ್ಟೋಬರ್ 13ರಂದು ಮಧ್ಯಪ್ರದೇಶದ ದಾತಿಯ ಜಿಲ್ಲೆಯ ರತನ್‌ಗಡ ದೇವಸ್ಥಾನದ ಬಳಿಕ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 115 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ನದಿಯ ಮೇಲೆ ಭಕ್ತರು ದಾಟುತ್ತಿದ್ದ ಸೇತುವೆ ಕುಸಿಯುವ ಹಂತದಲ್ಲಿ ಎಂಬ ವದಂತಿಯಿಂದ ಕಾಲ್ತುಳಿತ ಉಂಟಾಗಿತ್ತು.

2014:
2014 ಅಕ್ಟೋಬರ್ 3ರಂದು ಪಟ್ನಾದ ಗಾಂಧಿ ಮೈದಾನದಲ್ಲಿ ದಸರಾ ಸಂಭ್ರಮಾಚರಣೆ ಸಮಾಪ್ತಿಯ ಬೆನ್ನಲ್ಲೇ ಉಂಟಾದ ಕಾಲ್ತುಳಿತದಲ್ಲಿ 32 ಮಂದಿ ಸಾವಿಗೀಡಾದರು. ಘಟನೆಯಲ್ಲಿ 26 ಮಂದಿ ಗಾಯಗೊಂಡಿದ್ದರು.

2015:
2015 ಜುಲೈ 14ರಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಪುಷ್ಕರಂ ಉತ್ಸವದ ಪ್ರಾರಂಭದ ದಿನದಂದು ಗೋದಾವರಿ ನದಿಯ ದಡದಲ್ಲಿ ಅಪಾರ ಸಂಖೆಯಲ್ಲಿ ಭಕ್ತರು ಸೇರಿದ್ದರು. ಈ ಸಂದರ್ಭದಲ್ಲಿ ಸ್ನಾನದ ಸ್ಥಳದಲ್ಲಿ ಸಂಭವಿಸಿದ ನೂಕುನುಗ್ಗಲಿನಲ್ಲಿ 27 ಮಂದಿ ಮೃತಪಟ್ಟಿದ್ದರಲ್ಲದೆ 20 ಮಂದಿ ಗಾಯಗೊಂಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries