ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು ಕೇಂದ್ರ ಸರ್ಕಾರದ ಪಾರ್ಲಿಮೆಂಟ್ ಆಕ್ಟ್ 2009 ರ ಅಧಿನಿಯಮದ ಅಡಿಯಲ್ಲಿ 2009 ನೆಯ ಇಸವಿಯಿಂದ ಕೇರಳ ರಾಜ್ಯದ ಕಾಸರಗೋಡಿನ ಪೆರಿಯದಲ್ಲಿ ಸುಮಾರು 27 ವಿಭಾಗಗಳನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ದೇಶದ ಎಲ್ಲ ಭಾಗದ ನುರಿತ ಅಧ್ಯಾಪಕರನ್ನು ಒಳಗೊಂಡಿದೆ.
2019 ರಲ್ಲಿ ಕನ್ನಡಾಸಕ್ತರ ಒತ್ತಾಯದಿಂದ ಯು.ಜಿ.ಸಿ. ಯ ಒಪ್ಪಿಗೆಯೊಂದಿಗೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗವು ಕಾರ್ಯನಿರ್ವಹಿಸುತ್ತಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶಾತಿಗೆ ಎನ್.ಟಿ.ಎ. ನಡೆಸುವ ಸಿ.ಯು.ಸಿ.ಇ.ಟಿ. ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬೇಕು. ಆದರೆ ೨೦೨೧-೨೨ ರ ಶೈಕ್ಷಣಿಕ ವರ್ಷದಲ್ಲಿ ಕಾರಣಾಂತರಗಳಿಂದ ಪ್ರವೇಶ ನಡೆದಿಲ್ಲ. ಆದರೆ ಹಲವಾರು ವಿದ್ಯಾರ್ಥಿಗಳ ಮನವಿಯ ಮೇರೆಗೆ ವಿಶ್ವವಿದ್ಯಾಲಯ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳ ದಾಖಲಾತಿಗೆ ವಿಶ್ವವಿದ್ಯಾಲಯ ಅನುಮತಿ ನೀಡಿರುತ್ತದೆ. ಆಸಕ್ತ ವಿದ್ಯಾರ್ಥಿಗಳು ಅಥವಾ ಹೆತ್ತವರು 08-01-2022 ರ ಶನಿವಾರದ ಒಳಗಾಗಿ 6282871092, 9633957423 ಈ ದೂರವಾಣಿಗೆ ಕರೆ ಮಾಡಬಹುದು.