ಬೀಜಿಂಗ್: ಕಳೆದ ವರ್ಷ ಚೀನಾದ ಜನಸಂಖ್ಯೆ 5 ಲಕ್ಷಕ್ಕೂ ಕಡಿಮೆ ಏರಿಕೆ ಕಂಡಿದ್ದು, ಇದರೊಂದಿಗೆ ಸತತ 5 ವರ್ಷಗಳಿಂದ ದೇಶದ ಜನ ಪ್ರಮಾಣ ಕುಸಿತಕ್ಕೊಳಗಾದಂತಾಗಿದೆ.
2021 ಅಂತ್ಯದ ವೇಳೆಗೆ ಚೀನಾ ಜನಸಂಖ್ಯೆ 1.4126 ಶತಕೋಟಿ ದಾಖಲಾಗಿತ್ತು. ಅದಕ್ಕೂ ಹಿಂದಿನ ವರ್ಷ 1.4120 ಶತಕೋಟಿ ಜನಸಂಖ್ಯೆ ದಾಖಲಾಗಿತ್ತು.
ದೇಶದಲ್ಲಿ ಜನನ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಕುಸಿತ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ದೇಶದ ಆರ್ಥಿಕ ಪ್ರಗತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಚೀನಾದ ನ್ಯಾಷನಲ್ ಬ್ಯೂರೊ ಆಫ್ ಸ್ಟಾಟಿಸ್ಟಿಕ್ಸ್ ಸಂಸ್ಥೆ ಜನಸಂಖ್ಯೆ ಮಾಹಿತಿಯನ್ನು ಬಹಿರಂಗಪಡಿಸಿದೆ.