ಮಂಜೇಶ್ವರ : ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ನಿರ್ದೇಶನದನ್ವಯ ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಯೋಜನೆ 2021 - 22 ಸಾಲಿನ ವಾರ್ಷಿಕ ಯೋಜನೆಗೊಳಪಟ್ಟ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸೃಜನೋತ್ಸವ ಯು ಪಿ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಜ. 16 ರಂದು ಭ|ಆನುವಾರ ಬೆಳಿಗ್ಗೆ 9 ರಿಂದ ಪೈವಳಿಕೆ ಮೇಜರ್ ಯೂತ್ ಕ್ಲಬ್ ಲೈಬ್ರರಿ ಯ ಸಹಕಾರದೊಂದಿಗೆ ಪೈವಳಿಕೆ ನಗರ ಸರ್ಕಾರಿ ಶಾಲೆಯಲ್ಲಿ ಕೋವಿಡ್ ನಿಯಮ ಪಾಲನೆಯೊಂದಿಗೆ ನಡೆಯಲಿದೆ.
ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಂತಿ ಕೆ. ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಕೆ ವಿ ಕುಂಞÂ್ಞ ರಾಮನ್ ಉದ್ಘಾಟಿಸುವರು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ ಯಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೀಂಜ ಗ್ರಾ.ಪಂ. ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ವಹಿಸುವರು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್ ಪಿ ಕೆ ಉದ್ಘಾಟಿಸುವರು. ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯರಾದ ಪುಷ್ಪಲಕ್ಷ್ಮಿ, ಜುಲ್ವಿಕರ್ ಆಲಿ, ಅಬ್ದುಲ್ ರಜಾಕ್ , ಸುನಿತಾ ವಲ್ಟಿ ಡಿ'ಸೋಜ, ಶಾಲಾ ಮುಖ್ಯೋಪಾಧ್ಯಯ ಬಿ.ಇಬ್ರಾಹಿಂ ಮೊದಲಾದವರು ಭಾಗವಹಿಸುವರು.