ಕೋಲ್ಕತ: ನೇತಾಜಿ ರಿಸರ್ಚ್ ಬ್ಯೂರೊ 2022ನೇ ಸಾಲಿನ ನೇತಾಜಿ ಪ್ರಶಸ್ತಿಯನ್ನು ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ನೀಡಿ ಗೌರವಿಸಿದೆ.
ಕೋಲ್ಕತಾದಲ್ಲಿರುವ ಜಪಾನ್ ದೂತವಾಸ ಕಚೇರಿಯ ಮುಖ್ಯಸ್ಥ ನಕಮುರ ಯುಟಾಕ ಈ ಪ್ರಶಸ್ತಿಯನ್ನು ಶಿಂಜೊ ಪರವಾಗಿ ಸ್ವೀಕರಿಸಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನಾಚರಣೆ ಪ್ರಯುಕ್ತ ಅವರ ಮನೆಯಲ್ಲಿಯೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಮಾರಂಭ ಏರ್ಪಾಡಾಗಿದ್ದು ವಿಶೇಷ.