ನವದೆಹಲಿ: ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ಅವಧಿಯನ್ನು ಮೂರು ವರ್ಷಗಳ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಮಾ.31, 2025 ವರೆಗೆ ಆಯೋಗದ ಅವಧಿ ವಿಸ್ತರಣೆಯಾಗಿದೆ. ಮೂರು ವರ್ಷಗಳ ಅವಧಿಗೆ 43.68 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಪುಟದ ಈ ನಿರ್ಧಾರದಿಂದ ಸಫಾಯಿ ಕರ್ಮಚಾರಿಗಳು ಪ್ರಮುಖ ಫಲಾನುಭವಿಗಳಾಗಿರಲಿದ್ದಾರೆ. ಎಂಎಸ್ ಕಾಯ್ದೆ ಸಮೀಕ್ಷೆಯ ಪ್ರಕಾರ ಈ ವರೆಗೂ (ಡಿಸೆಂಬರ್ 31, 2021) 58,098 ಮಂದಿ ಮ್ಯಾನುಯಲ್ ಸ್ಕ್ಯಾವೆಂಜರ್ ಗಳನ್ನು ಗುರುತಿಸಲಾಗಿದೆ. ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗವನ್ನು 1993 ರಲ್ಲಿ ಸ್ಥಾಪಿಸಲಾಗಿತ್ತು.