ತಿರುವನಂತಪುರ: ಸಮಾಜಘಾತುಕ ಶಕ್ತಿಗಳ ವಿರುದ್ಧ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇದುವರೆಗೆ ರಾಜ್ಯದಲ್ಲಿ 13,032 ಗೂಂಡಾಗಳನ್ನು ಬಂಧಿಸಲಾಗಿದೆ. 215 ಜನರ ವಿರುದ್ಧ ಗನ್ ಕಾನೂನಿನಡಿ ಪ್ರಕರಣ ದಾಖಲಿಸಲಾಗಿದೆ. ಅಂಕಿಅಂಶಗಳು ಡಿಸೆಂಬರ್ 18 ರಿಂದ ಜನವರಿ 9 ರವರೆಗಿನ ಅವಧಿಯದ್ದಾಗಿದೆ.
ಈ ಅವಧಿಯಲ್ಲಿ ಪೋಲೀಸರು ರಾಜ್ಯಾದ್ಯಂತ 16,680 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ತಪಾಸಣೆಗಾಗಿ 5,987 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಾಮೀನು ಷರತ್ತು ಉಲ್ಲಂಘಿಸಿದ 61 ಮಂದಿಯ ಜಾಮೀನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ತಿರುವನಂತಪುರ ಗ್ರಾಮಾಂತರದಲ್ಲಿ ಅತಿ ಹೆಚ್ಚು ಗೂಂಡಾಗಳನ್ನು ಬಂಧಿಸಲಾಗಿದೆ. ಇಲ್ಲಿ 1,506 ಜನರನ್ನು ಬಂಧಿಸಲಾಗಿದೆ. ಅಲಪ್ಪುಳದಲ್ಲಿ 1,322, ಕೊಲ್ಲಂ ನಗರದಲ್ಲಿ 1,054, ಪಾಲಕ್ಕಾಡ್‍ನಲ್ಲಿ 1,023 ಮತ್ತು ಕಾಸರಗೋಡಿನಲ್ಲಿ 1,020 ಮಂದಿಯನ್ನು ಬಂಧಿಸಲಾಗಿದೆ. ತಿರುವನಂತಪುರ ಗ್ರಾಮಾಂತರದಲ್ಲಿ ಅತಿ ಹೆಚ್ಚು ಮೊಬೈಲ್ ಫೆÇೀನ್ ವಶಪಡಿಸಿಕೊಳ್ಳಲಾಗಿದೆ. 1,103 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೋಲೀಸ್ ವರಿಷ್ಠ ಅನಿಲ್ ಕಾಂತ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.