HEALTH TIPS

ಅರಣ್ಯ ವ್ಯಾಪ್ತಿ 2,200 ಚ.ಕಿ.ಮೀ ವೃದ್ಧಿ

         ನವದೆಹಲಿ: ಭಾರತದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿಯು 2,200 ಚದರ ಕಿ.ಮೀ.ನಷ್ಟು ಹೆಚ್ಚಿದೆ. ಆದರೆ, ಅದರ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ತುಸು ಕಡಿಮೆಯಾಗಿದೆ.

       ಗುರುವಾರ ಅರಣ್ಯ ವ್ಯಾಪ್ತಿ ಕುರಿತಾದ 2021ರ ವರದಿ ಬಿಡುಗಡೆ ಮಾಡಲಾಗಿದೆ.

2019ರ ಸ್ಥಿತಿಗೆ ಹೋಲಿಸಿದರೆ, ಅರಣ್ಯ ವ್ಯಾಪ್ತಿಯು 1,540 ಚದರ ಕಿ.ಮೀ ಮತ್ತು ಮರಗಳ ವ್ಯಾಪ್ತಿಯು 721 ಚದರ ಕಿ.ಮೀ.ನಷ್ಟು ಹಿಗ್ಗಿದೆ.

        ಆದರೆ, 2017 ಮತ್ತು 2019ರ ಅವಧಿಯಲ್ಲಿ ಅರಣ್ಯ ಬೆಳವಣಿಗೆ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿತ್ತು. ಈ ಅವಧಿಯಲ್ಲಿ ಅರಣ್ಯ 3,976 ಚದರ ಕಿ.ಮೀ. ಮತ್ತು ಮರಗಳ ವ್ಯಾಪ್ತಿಯು 1,212 ಚದರ ಕಿ.ಮೀ. ಏರಿಕೆಯಾಗಿತ್ತು.

        ದ್ವೈವಾರ್ಷಿಕ ಅರಣ್ಯ ವರದಿಗೆ ಸಂಬಂಧಿತ ಅಂಕಿ ಅಂಶಗಳು ಅಕ್ಟೋಬರ್ -ಡಿಸೆಂಬರ್‌ 2019ರ ಅವಧಿಗೆ ಸಂಬಂಧಿಸಿವೆ. ಪ್ರಗತಿ ಕುಸಿತಕ್ಕೆ ಕೋವಿಡ್‌ ಕಾರಣ ಎನ್ನಲಾಗದು. ಏಕೆಂದರೆ, ಈ ಅವಧಿಯಲ್ಲೂ ಅರಣ್ಯೀಕರಣ ಚಟುಟಿಕೆಗಳು ಚಾಲ್ತಿಯಲ್ಲಿದ್ದವು. ಆದರೂ, ಪ್ರಗತಿ ಕುಂಠಿತಕ್ಕೆ ವರದಿಯಲ್ಲಿ ಕಾರಣವನ್ನು ಉಲ್ಲೇಖಿಸಿಲ್ಲ.

        ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು, ಮರಗಳ ವ್ಯಾಪ್ತಿ ವಿಸ್ತರಿಸಲು ರಾಷ್ಟ್ರೀಯ ಹಸಿರು ಮಿಷನ್‌ನ ಎರಡನೇ ಹಂತದಲ್ಲಿ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

         ವರದಿಯಂತೆ, ದಟ್ಟ ಅರಣ್ಯದ ವ್ಯಾಪ್ತಿ 2019 ಮತ್ತು 2021ರ ನಡುವೆ ಸುಮಾರು 1,582 ಚದರ ಕಿ.ಮೀ.ನಷ್ಟು ಕಡಿಮೆ ಆಗಿದೆ. ಆದರೆ, ಅತಿದಟ್ಟ ಅರಣ್ಯ ವ್ಯಾಪ್ತಿಯು ಸುಮಾರು 501 ಚದರ ಕಿ.ಮೀನಷ್ಟು ಹೆಚ್ಚಾಗಿದೆ.

          ಅರಣ್ಯ ವ್ಯಾಪ್ತಿ ಹೆಚ್ಚಳವಾಗಿರುವ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ರಾಜ್ಯದಲ್ಲಿ 155 ಚದರ ಕಿ.ಮೀ. ಅರಣ್ಯ ಪ್ರದೇಶ ಹೆಚ್ಚಿದೆ. ಉಳಿದಂತೆ, ಆಂಧ್ರಪ್ರದೇಶ (747 ಚ.ಕಿ.ಮೀ), ತೆಲಂಗಾಣ (632 ಚ.ಕಿ.ಮೀ), ಒಡಿಶಾ (537 ಚ.ಕಿ.ಮೀ) ಮತ್ತು ಜಾರ್ಖಂಡ್‌ (110 ಚ.ಕಿ.ಮೀ) ಇವೆ. ಈಶಾನ್ಯ ರಾಜ್ಯಗಳಲ್ಲಿ ಅರಣ್ಯ ವ್ಯಾಪ್ತಿಯು ಕುಗ್ಗಿದೆ.


       


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries