ತಿರುವನಂತಪುರ: ಪೂಜಾಪ್ಪುರ ಕೇಂದ್ರ ಕಾರಾಗೃಹದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. 239 ಕೈದಿಗಳಿಗೆ ಸೋಂಕು ಬಾಧಿಸಿರುವುದು ಪತ್ತೆಯಾಗಿದೆ. 969 ಜನರನ್ನು ಪರೀಕ್ಷಿಸಲಾಗಿದೆ. ಕೊರೋನಾ-ಪಾಸಿಟಿವ್ ಆದವರನ್ನು ಪ್ರತ್ಯೇಕ ಸೆಲ್ ಗೆ ವರ್ಗಾಯಿಸಲಾಗಿದೆ.
ಜೈಲಿನಲ್ಲಿರುವ ಹೆಚ್ಚಿನ ಕೈದಿಗಳಲ್ಲಿ ರೋಗಲಕ್ಷಣಗಳು ಕಂಡುಬಂದಿದ್ದರಿಂದ ಕಳೆದ ಕೆಲವು ದಿನಗಳಲ್ಲಿ ಕೊರೋನಾ ಪರೀಕ್ಷೆಯನ್ನು ನಡೆಸಲಾಯಿತು. 239 ಮಂದಿಗೆ ಪಾಸಿಟಿವ್ ಆಗಿದ್ದು ಮತ್ತು ಪ್ರತ್ಯೇಕ ಸೆಲ್ ಗೆ ವರ್ಗಾಯಿಸಲಾಯಿತು. ಸೋಂಕಿತರಲ್ಲದವರನ್ನೂ ನಿಗಾ ಇರಿಸಲಾಗಿದೆ. ಗಂಭೀರ ರೋಗಿಗಳನ್ನೂ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ತಪಾಸಣೆ ನಡೆಯಲಿದೆ ಎನ್ನುತ್ತಾರೆ ಜೈಲು ಅಧಿಕಾರಿಗಳು.