ತಿರುವನಂತಪುರ: ರಾಜ್ಯದಲ್ಲಿ ಇಂದು 2435 ಮಂದಿಗೆ ಕೊರೊನಾ ದೃಢಪಟ್ಟಿವೆ. ತಿರುವನಂತಪುರ 481, ಎರ್ನಾಕುಲಂ 400, ಕೋಝಿಕ್ಕೋಡ್ 299, ಕಣ್ಣೂರು 180, ತ್ರಿಶೂರ್ 171, ಕೊಲ್ಲಂ 155, ಕೊಟ್ಟಾಯಂ 153, ಮಲಪ್ಪುರಂ 138, ಪತ್ತನಂತಿಟ್ಟ 130, ಆಲಪ್ಪುಳ 107, ವಯನಾಡ್ 65, ಪಾಲಕ್ಕಾಡ್ 58, ಇಡುಕ್ಕಿ 57, ಕಾಸರಗೋಡು 41 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 48,658 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತ (WIPR) 10 ಕ್ಕಿಂತ ಹೆಚ್ಚಿನ 5 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 6 ವಾರ್ಡ್ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,09,032 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 93,190 ಮಂದಿ ಮನೆ/ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 15,842 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 169 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 18,904 ಕೊರೋನಾ ಪ್ರಕರಣಗಳಲ್ಲಿ, ಕೇವಲ 10.7 ಶೇಕಡ ಜನರು ಮಾತ್ರ ಆಸ್ಪತ್ರೆಗಳು /ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 22 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 219 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 48,035ಕ್ಕೆ ಏರಿಕೆಯಾಗಿದೆ. ಇಂದು ರೋಗ ಪತ್ತೆಯಾದವರಲ್ಲಿ 38 ಮಂದಿ ಹೊರ ರಾಜ್ಯದವರು. 2241 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 134 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಇಪ್ಪತ್ತೆರಡು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2704 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 487, ಕೊಲ್ಲಂ 276, ಪತ್ತನಂತಿಟ್ಟ 124, ಆಲಪ್ಪುಳ 138, ಕೊಟ್ಟಾಯಂ 244, ಇಡುಕ್ಕಿ 118, ಎರ್ನಾಕುಲಂ 434, ತ್ರಿಶೂರ್ 161, ಪಾಲಕ್ಕಾಡ್ 27, ಮಲಪ್ಪುರಂ 73, ಕೋಝಿಕ್ಕೋಡ್ 311, ವಯನಾಡ್ 101, ಕಣ್ಣೂರು 166, ಕಾಸರಗೋಡು 44 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 18,904 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 51,81,981 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.