ನವದೆಹಲಿ: ಭಾರತೀಯ ಔಷಧ ನಿಯಂತ್ರಕರಿಂದ ಶೀಘ್ರದಲ್ಲೇ ಸಾಮಾನ್ಯ ಮಾರುಕಟ್ಟೆಗೆ ಅನುಮೋದನೆ ಪಡೆಯುವ ನಿರೀಕ್ಷೆಯಿರುವ ಕೋವಿಡ್ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಬೆಲೆಯನ್ನು ಪ್ರತಿ ಡೋಸ್‌ಗೆ ₹275 ಮತ್ತು ಹೆಚ್ಚುವರಿ ಸೇವಾ ಶುಲ್ಕವಾಗಿ ₹150 ನಿಗದಿಪಡಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲಸಿಕೆಗಳನ್ನು ಕೈಗೆಟಕುವ ಬೆಲೆಗೆ ನೀಡುವಂತೆ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (ಎನ್‌ಪಿಪಿಎ) ನಿರ್ದೇಶನ ನೀಡಿದೆ ಎಂದೂ ಹೇಳಿವೆ.
ಸದ್ಯಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್‌ನ ಪ್ರತಿ ಡೋಸ್‌ಗೆ ₹1,200 ಮತ್ತು ಕೋವಿಶೀಲ್ಡ್‌ನ ಪ್ರತಿ ಡೊಸ್‌ಗೆ ₹780 ಇದೆ. ಇದು ₹150 ಸೇವಾಶುಲ್ಕವನ್ನೂ ಒಳಗೊಂಡಿದೆ. ಎರಡೂ ಲಸಿಕೆಗಳಿಗೆ ದೇಶದಲ್ಲಿ ತುರ್ತು ಬಳಕೆಗೆ ಮಾತ್ರ ಅನುಮೋದನೆ ನೀಡಲಾಗಿದೆ.
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಸಾಮಾನ್ಯ ಮಾರುಕಟ್ಟೆಯಲ್ಲಿ ಒದಗಿಸಲು ಕೇಂದ್ರದ ಔಷಧ ನಿಯಂತ್ರಣ ಮಂಡಳಿಯ ತಜ್ಞರ ಸಮಿತಿಯು ಈಚೆಗೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.