ನವದೆಹಲಿ: ಭಾರತದಲ್ಲಿ ಕೋವಿಡ್-19 ಸೋಂಕು ಉಲ್ಬಣವಾಗುತ್ತಿರುವ ಹೊತ್ತಿನಲ್ಲೇ ಓಮಿಕ್ರಾನ್ ಸೋಂಕಿತರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಈ ವರೆಗೂ ದೇಶಾದ್ಯಂತ 3,071 ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ದೇಶಾದ್ಯಂತ ಇರುವ ಒಟ್ಟಾರೆ ಓಮಿಕ್ರಾನ್ ಸೋಂಕಿತರ ಸಂಖ್ಯೆ 3,071ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ದೇಶದ ಒಟ್ಟು 27 ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದೆ.
ಈ ಪೈಕಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 876 ಮಂದಿ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 381 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎನ್ನಲಾಗಿದೆ.
ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿರುವ ಇತರ ರಾಜ್ಯಗಳೆಂದರೆ ದೆಹಲಿ 513, ಕರ್ನಾಟಕ 333, ರಾಜಸ್ಥಾನ 291, ಕೇರಳ 284, ಗುಜರಾತ್ 204, ತಮಿಳುನಾಡು 121, ಹರಿಯಾಣ 114, ತೆಲಂಗಾಣ 123, ಒಡಿಶಾ 60, ಉತ್ತರಪ್ರದೇಶ 31, ಆಂಧ್ರಪ್ರದೇಶ 28, ಪಶ್ಚಿಮ ಬಂಗಾಳ 27, ಗೋವಾ 19, ಅಸ್ಸಾಂ 9, ಮಧ್ಯಪ್ರದೇಶ 9, ಉತ್ತರಾಖಂಡ 8, ಮೇಘಾಲಯ 4, ಅಂಡಮಾನ್ ನಿಕೋಬಾರ್ 3, ಜಮ್ಮು ಮತ್ತು ಕಾಶ್ಮೀರ 2, ಪಾಂಡಿಚೆರಿ 2 ಪಂಜಾಬ್ 2 ಪ್ರಕರಣಗಳು ವರದಿಯಾಗಿವೆ.
ಅಂತೆಯೇ ಹಿಮಾಚಲಪ್ರದೇಶ, ಲಡಾಖ್, ಚಂಡೀಗಢ 1, ಮಣಿಪುರ ತಲಾ ಒಂದು ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಏತನ್ಮಧ್ಯೆ, ಭಾರತವು ಕಳೆದ 24 ಗಂಟೆಗಳಲ್ಲಿ 1,41,986 ಹೊಸ COVID-19 ಪ್ರಕರಣಗಳನ್ನು ವರದಿ ಮಾಡಿದ್ದು ಸಕ್ರಿಯ ಪ್ರಕರಣಗಳು ಪ್ರಸ್ತುತ 4,72,169ಕ್ಕೇರಿದೆ.