ಮುಂಬೈ: ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿ ಮತ್ತು 11ನೇ ತರಗತಿಗಳನ್ನು ಮುಚ್ಚಲು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೋಮವಾರ ಆದೇಶಿಸಿದೆ.
ಒಂದು ತಿಂಗಳ ನಂತರ ನಡೆಯಲಿರುವ ನಿರ್ಣಾಯಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು 10ನೇ ತರಗತಿ (ಎಸ್‌ಎಸ್‌ಸಿ) ಮತ್ತು 12ನೇ ತಗರತಿ (ಎಚ್‌ಎಸ್‌ಸಿ) ಯನ್ನು ನಡೆಸಲು ತೀರ್ಮಾನಿಸಲಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ಮುಂದುವರಿಯಲಿವೆ.
ಬಿಎಂಸಿ ಆಯುಕ್ತರಾದ ಐ.ಎಸ್. ಚಾಹಲ್ ಮಾತನಾಡಿ, 'ಶಾಲೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ತರಗತಿಗಳು ನಡೆಯಲಿವೆ. ಈ ಹಿಂದೆ ನಡೆಯುತ್ತಿದ್ದಂತೆ ಎಲ್ಲ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಗತಿಗಳು ನಡೆಯುತ್ತವೆ' ಎಂದು ತಿಳಿಸಿದ್ದಾರೆ.
ಆನ್‌ಲೈನ್ ತರಗತಿಗಳನ್ನು ನಡೆಸಲು ಅನುಮತಿ ನೀಡಿ 2020ರ ಮಾರ್ಚ್‌ನಲ್ಲಿ ಮುಚ್ಚಲಾಗಿದ್ದ ಶಾಲೆಗಳನ್ನು ಕೆಲವು ವಾರಗಳ ಹಿಂದಷ್ಟೇ ತೆರೆಯಲು ಬಿಎಂಸಿ ಮತ್ತು ರಾಜ್ಯ ಸರ್ಕಾರ ನಿರ್ಧರಿಸಿದ್ದವು.
ಮೂರನೇ ಅಲೆಯ ಭೀತಿ ಎದುರಾಗಿರುವುದರಿಂದಾಗಿ.