ಸ್ಪೆಕ್ಟ್ರಂ ಹರಾಜಿನ ಕಂತುಗಳಿಗೆ ಸಂಬಂಧಿಸಿದ ಸಂಪೂರ್ಣ ಬಡ್ಡಿ ಮತ್ತು ತರಂಗಾಂತರಗಳ ಬಳಕೆಗಾಗಿ ಸರಕಾರಕ್ಕೆ ಪಾವತಿಸಬೇಕಿರುವ ಬಾಕಿಗಳನ್ನು ಈಕ್ವಿಟಿ ಶೇರುಗಳನ್ನಾಗಿ ಪರಿವರ್ತಿಸಲು ಕಂಪನಿಯ ಆಡಳಿತ ಮಂಡಳಿಯು ಅನುಮತಿಸಿದೆ ಎಂದು ವೋಡಾಫೋನ್ ಐಡಿಯಾ ಮಂಗಳವಾರ ತಿಳಿಸಿದೆ ಎಂದು ವರದಿಯಾಗಿದೆ.

ಕಂಪನಿಯ ಅಂದಾಜುಗಳಂತೆ ಬಡ್ಡಿಯ 'ನಿವ್ವಳ ಪ್ರಸ್ತುತ ಮೌಲ್ಯ (ಎನ್ಪಿವಿ)'ವು ಸುಮಾರು 16,000 ಕೋ.ರೂ.ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಪತಿವರ್ತನೆಯು ಪ್ರವರ್ತಕರು ಸೇರಿದಂತೆ ಕಂಪನಿಯ ಎಲ್ಲ ಹಾಲಿ ಶೇರುದಾರರ ನಿಯಂತ್ರಣವನ್ನು ತಗ್ಗಿಸಲಿದೆ.
ಬಡ್ಡಿ ಮತ್ತು ಬಾಕಿಗಳನ್ನು ಈಕ್ವಿಟಿ ಶೇರುಗಳನ್ನಾಗಿ ಪರಿವರ್ತಿಸಿದ ಬಳಿಕ ಸರಕಾರವು ವೋಡಾಫೋನ್ ಐಡಿಯಾದಲ್ಲಿ ಸುಮಾರು ಶೇ.35.8ರಷ್ಟು ಶೇರು ಬಂಡವಾಳವನ್ನು ಹೊಂದುವ ನಿರೀಕ್ಷೆಯಿದೆ. ಪ್ರವರ್ತಕರಾದ ವೊಡಾಫೋನ್ ಗ್ರೂಪ್ ಸುಮಾರು ಶೇ.28.5 ಮತ್ತು ಆದಿತ್ಯ ಬಿರ್ಲಾ ಗ್ರೂಪ್ ಸುಮಾರು ಶೇ.17.8ರಷ್ಟು ಶೇರುಗಳನ್ನು ಹೊಂದಿರಲಿವೆ.
ಭಾರತದ ದೂರಸಂಪರ್ಕ ಕ್ಷೇತ್ರವು ಬಿಲಿಯಾಧಿಪತಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ಪ್ರವೇಶದಿಂದಾಗಿ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದ್ದು, ಕೆಲವು ಎದುರಾಳಿ ಕಂಪನಿಗಳು ಅನಿವಾರ್ಯವಾಗಿ ಉದ್ಯಮದಿಂದ ಹೊರಹೋಗಿವೆ. ಸರಕಾರಕ್ಕೆ ಭಾರೀ ಬಾಕಿಯೂ ದೂರಸಂಪರ್ಕ ಕ್ಷೇತ್ರದ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿದೆ.
ವೊಡಾಫೋನ್ ಐಡಿಯಾ ಸರಕಾರಿ ಬಾಕಿಗಳ ಪೈಕಿ 7,854 ಕೋ.ರೂ.ಗಳನ್ನು ಪಾವತಿಸಿದೆ, ಆದರೂ ಅದು ಈಗಲೂ ಸುಮಾರು 50,000 ಕೋ.ರೂ.ಗಳ ಬಾಕಿಯನ್ನು ಉಳಿಸಿಕೊಂಡಿದೆ.