ತಿರುವನಂತಪುರ: ಕೋವಿಡ್ ಆರ್ಥಿಕ ನೆರವು ಪಡೆಯಲು ಅರ್ಹರಿಗೆ ಶಿಬಿರಗಳು ಮತ್ತು ಮನೆಗೆ ಭೇಟಿ ನೀಡುವ ಮೂಲಕ ಎರಡು ದಿನಗಳೊಳಗೆ ಮೊತ್ತವನ್ನು ಪಾವತಿಸುವಂತೆ ಮುಖ್ಯ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಸಾಫ್ಟ್‍ವೇರ್‍ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವಂತೆಯೂ ಅವರು ನಿರ್ದೇಶಿಸಿರುವರು.
ಪ್ರಸ್ತುತ, 36,000 ಅರ್ಜಿಗಳನ್ನು ಅನುದಾನಕ್ಕಾಗಿ ಸ್ವೀಕರಿಸಲಾಗಿದೆ. ಕೋವಿಡ್‍ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ರಾಜ್ಯ ಸರ್ಕಾರದ ಸಹಾಯಧನವೂ ಪ್ರಗತಿಯಲ್ಲಿದೆ. ಇಲ್ಲಿಯವರೆಗೆ 3794 ಮಕ್ಕಳು ಅರ್ಹರಾಗಿದ್ದಾರೆ. ಮಕ್ಕಳ ಮಾಹಿತಿಯನ್ನು ಜಿಲ್ಲೆಗಳಲ್ಲಿ ಸಂಗ್ರಹಿಸಿ ಕೇಂದ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಿದ್ಧಪಡಿಸಿರುವ ಬಾಲಸ್ವರಾಜ್ ಪೋರ್ಟಲ್‍ನಲ್ಲಿ ದಾಖಲಿಸಲಾಗುತ್ತದೆ.
ಒಂದು ಬಾರಿಯ ಅನುದಾನ ರೂ.3 ಲಕ್ಷ ಮತ್ತು ಮಾಸಿಕ ಪ್ರಾಯೋಜಕತ್ವ ರೂ.2,000.ಲಭಿಸಲಿದೆ. ಜಿಲ್ಲಾಧಿಕಾರಿಗಳ ಮೂಲಕ ತಮ್ಮ ಮಕ್ಕಳನ್ನು ಪರಿಶೀಲಿಸಿದವರಿಗೆ ಮತ್ತು ಪಿಎಂಕೇರ್ ಪೋೀರ್ಟಲ್‍ನಲ್ಲಿ ಅನುಮೋದನೆಯನ್ನು ನೋಂದಾಯಿಸಿದವರಿಗೆ ಆರ್ಥಿಕ ನೆರವು ನೀಡಲಾಗುವುದು. 101 ಮಕ್ಕಳ ಪರಿಶೀಲನೆಯನ್ನು ಜಿಲ್ಲಾಧಿಕಾರಿಗಳು ಪೂರ್ಣಗೊಳಿಸಿದ್ದಾರೆ.
ಇದೇ ವೇಳೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, ಕೇರಳದಲ್ಲಿ ಓಮಿಕ್ರಾನ್ ರೂಪಾಂತರ ಹರಡುತ್ತಿದೆ. ಮುಂದಿನ ಮೂರು ವಾರಗಳು ರಾಜ್ಯದ ಪಾಲಿಗೆ ನಿರ್ಣಾಯಕ. ರಾಜ್ಯದಲ್ಲಿ ಇದುವರೆಗೆ ಪರೀಕ್ಷೆಗೆ ಒಳಪಟ್ಟಿರುವ ಮಾದರಿಗಳ ಪೈಕಿ ಶೇ.94 ರಷ್ಟು ಓಮಿಕ್ರಾನ್ ಮಾದರಿಗಳಾಗಿವೆ. ಡೆಲ್ಟಾ ರೂಪಾಂತರವು ಕೇವಲ ಆರು ಪ್ರತಿಶತ. ಕೋವಿಡ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿರುವರು.
ವ್ಯಾಪಕವಾದ ಓಮಿಕ್ರಾನ್ ರೂಪಾಂತರವು ಪರೀಕ್ಷೆಯಿಂದ ಸ್ಪಷ್ಟವಾಗಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಐಸಿಯುಗಳು ಮತ್ತು ವೆಂಟಿಲೇಟರ್‍ಗಳ ಬಳಕೆ ಕೂಡ ಕಡಿಮೆಯಾಗಿದೆ. 3.6 ರಷ್ಟು ರೋಗಿಗಳು ಮಾತ್ರ ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ. ಕೋವಿಡ್ ರೋಗಿಗಳಲ್ಲಿ ಐಸಿಯು ಬಳಕೆ ಶೇಕಡಾ ಎರಡರಷ್ಟು ಕಡಿಮೆಯಾಗಿದೆ.
ರಾಜ್ಯದಲ್ಲಿ ಶೇಕಡಾ 96.4 ರಷ್ಟು ಕೋವಿಡ್ ರೋಗಿಗಳು ಮನೆಯ ಆರೈಕೆಯಲ್ಲಿದ್ದಾರೆ. 3.6 ರಷ್ಟು ರೋಗಿಗಳು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ಬರುವವರಿಗೆ ಚಿಕಿತ್ಸೆ ನಿರಾಕರಿಸಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸೌಲಭ್ಯಗಳಿದ್ದರೂ ಚಿಕಿತ್ಸೆ ನೀಡದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿದರು.