ಕಾಸರಗೋಡು: ಜಿಲ್ಲಾ ಎಂಪ್ಲೋಯಿಮೆಂಟ್ ಎಕ್ಸ್‍ಚೇಂಜ್ ಮತ್ತು ಎಂಪ್ಲೋಯಿಬಿಲಿಟಿ ಸೆಂಟರ್ ವತಿಯಿಂದ ಕಾಞಂಗಾಡು ನೆಹರೂ ಆಟ್ರ್ಸ್ ಮತ್ತು ಸಯನ್ಸ್ ಕಾಲೇಝಿನಲ್ಲಿ ಜಂಟಿಯಾಗಿ ನಡೆದ ಮೆಗಾ ಉದ್ಯೋಗ ಮೇಳದಲ್ಲಿ 389ಮಂದಿಗೆ ಉದ್ಯೋಗ ಲಭ್ಯವಾಗಿದೆ. ಜತೆಗೆ 1598ಮಂದಿಯ ಹೆಸರು ಸಾಧ್ಯತಾ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.
ಈ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡವರಿಗೆ ಎರಡನೇ ಹಂತದಲ್ಲಿ ಸ್ಕ್ರೀನಿಂಗ್ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆಮಡುವ ಪ್ರಕ್ರಿಯೆ ನಡೆಯಲಿದೆ. ಐ.ಟಿ, ಹೆಲ್ತ್ ಕೇರ್, ಹಾಸ್ಪಿಟಾಲಿಟಿ, ಟೆಕ್ನಿಕಲ್, ಮ್ಯಾನೇಜ್‍ಮೆಂಟ್, ಸೇಲ್ಸ್, ಮಾರ್ಕೆಟಿಂಗ್, ಓಫಿಸ್ ಅಡ್ಮಿನಿಸ್ಟ್ರೇಶನ್ ಸೇರಿದಂತೆ 60ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಂಡಿತ್ತು. 3275ಹುದ್ದೆಗಳಿಗಾಗಿ 6223ಮಂದಿ ಉದ್ಯೋಗಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಉದ್ಯೋಗಾರ್ಥಿಗಳಿಗೆ ಅವರ ವಿದ್ಯಾಭ್ಯಾಸದ ಅರ್ಹತೆಗನುಸಾರವಾಗಿ ಮೇಳದಲ್ಲಿ ಉದ್ಯೋಗ ಲಭಿಸುವಂತಾಗಿಗಿತ್ತು. ಭಾರತೀಯ ವಾಯುಸೇನೆಯಲ್ಲಿ ತೆರವಾಗಿರುವ ಹುದ್ದೆಗಳಿಗೆ ರಿಕ್ರೂಟ್‍ಮೆಂಟಿಗಾಗಿರುವ ಕ್ರಮಗಳನ್ನು ಪರಿಚಯಪಡಿಸುವ ನಿಟ್ಟಿನಲ್ಲಿ ಸೇನಾ ವಿಭಾಗದ ಸ್ಟಾಲ್‍ಗಳೂ ಮೇಳದಲ್ಲಿ ಪಾಲ್ಗೊಂಡಿತ್ತು.