ಕೊಯಂಬತ್ತೂರು: ಕೋವಿಡ್-19 ಮೂರನೆ ಅಲೆಯ ಪರಿಣಾಮವಾಗಿ ದೇಶಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ ಏರತೊಡಗಿದ್ದು, ಸಾವಿನ ಸಂಖ್ಯೆ, ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ ಈವರೆಗೂ ಸಮಸ್ಯೆಯಾಗಿ ಪರಿಣಮಿಸಿಲ್ಲ. ಆದರೂ ಏರುತ್ತಿರುವ ಸಂಖ್ಯೆಗಳ ಪೈಕಿ ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೇ ಸೋಂಕು ಹೆಚ್ಚಳವಾದರೆ ಇದು ಆರೋಗ್ಯ ಕ್ಷೇತ್ರದ ಮೇಲೆ ತೀವ್ರವಾದ ಒತ್ತಡ ಉಂಟು ಮಾಡಲಿದೆ.
ಇಂತಹದ್ದೇ ಪ್ರಕರಣವೊಂದು ಕೊಯಂಬತ್ತೂರಿನಲ್ಲಿ ವರದಿಯಾಗಿದೆ. ಇಲ್ಲಿನ ಗಾಂಧಿಪುರಂ ನಲ್ಲಿರುವ ಕುಟುಂಬವೊಂದರಲ್ಲಿ ಬಹುತೇಕ ಮಂದಿ ವೈದ್ಯರೇ ಆಗಿದ್ದು, ಅವರೆಲ್ಲರಿಗೂ ಕೋವಿಡ್-19 ಸೋಂಕು ತಗುಲಿದೆ. ಕೊಯಂಬತ್ತೂರು ಮಹಾನಗರ ಪಾಲಿಕೆ ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ಕುಟುಂಬದವರ ಹಾಗೂ ಸ್ಥಳೀಯರಿಂದ ಸ್ಯಾಂಪಲ್ ಗಳನ್ನು ಸಂಗ್ರಹಿಸಿದೆ.
39 ವರ್ಷದ ವೈದ್ಯರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಆರೋಗ್ಯ ಸಿಬ್ಬಂದಿಗಳು ನಂತರ, ವೈದ್ಯರ ನಾಲ್ವರು ಪ್ರಾಥಮಿಕ ಸಂಪರ್ಕಿತರಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಸಿಹೆಚ್ಒ ಸತೀಶ್ ಕುಮಾರ್ ತಿಳಿಸಿದ್ದಾರೆ. ವೈದ್ಯರ ತಂದೆ, ತಾಯಿ, ಪತ್ನಿ, ಪುತ್ರ ಪ್ರಾಥಮಿಕ ಸಂಪರ್ಕಿತರಾಗಿದ್ದು ಅವರೆಲ್ಲರಿಗೂ ಕೋವಿಡ್-19 ಸೋಂಕು ತಗುಲಿದೆ. ಕ್ಲಸ್ಟರ್ ಕೇಸ್ ಗಳನ್ನು ತಡೆಗಟ್ಟಲು ಸ್ಥಳೀಯರ ಸ್ಯಾಂಪಲ್ ಗಳನ್ನೂ ಸಂಗ್ರಹಿಸಲಾಗಿದೆ.