ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿರುವ ಮಧ್ಯೆ ಮಕ್ಕಳಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಇಂದಿನಿಂದ ದೇಶದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಲಾಗಿದ್ದು, ಮೊದಲ ದಿನವೇ ಸುಮಾರು 40 ಲಕ್ಷ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ.
ಈ ಕುರಿತಂತೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸೂಖ್ ಮಾಂಡವೀಯಾ, ವೆಲ್ಡನ್ ಯಂಗ್ ಇಂಡಿಯಾ, ಮಕ್ಕಳಿಗೆ ಲಸಿಕೆ ಅಭಿಯಾನದ ಮೊದಲ ದಿನವಾದ ಇಂದು ರಾತ್ರಿ 8 ಗಂಟೆಯವರೆಗೂ ದೇಶದಲ್ಲಿ ಸುಮಾರು 40 ಲಕ್ಷ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ
ದೇಶದ ಲಸಿಕಾ ಅಭಿಯಾನದಲ್ಲಿ ಇದು ಮತ್ತೊಂದು ಸಾಧನೆಯಾಗಿದೆ ಎಂದು ಮನ್ಸುಖ್ ಮಾಂಡವೀಯಾ ಹೇಳಿದ್ದಾರೆ.