ರಿಯಾದ್: ತೈಲ ರಾಷ್ಟ್ರ ಸೌದಿ ಅರೇಬಿಯಾದ ಖೇಬರ್ ಎನ್ನುವ ಸ್ಥಳದಲ್ಲಿ 4,500 ವರ್ಷಗಳಷ್ಟು ಹಳೆಯದಾದ ಹೆದ್ದಾರಿ ಪತ್ತೆಯಾಗಿದೆ.
ಅಷ್ಟೇ ಅಲ್ಲ ಸುತ್ತಮುತ್ತಲ ಪ್ರದೇಶದಲ್ಲಿ 18 ಸಾವಿರಕ್ಕೂ ಹೆಚ್ಚು ಗೋರಿಗಳು ಪತ್ತೆಯಾಗಿವೆ. ಇತಿಹಾಸಕಾರ ಮತ್ತು ಪುರಾತತ್ವ ಇಲಾಖೆ ಹೆಚ್ಚಿನ ಮಾಹಿತಿಯನ್ನು ಶೋಧಿಸುವಲ್ಲಿ ತೊಡಗಿದೆ.
ಸೌದಿ ಅರೇಬಿಯಾದಂಥ ಮರುಭೂಮಿ ಪ್ರದೇಶದಲ್ಲಿ ಇಂತಹದೊಂದು ವಿಶಿಷ್ಟ ಸಂಗತಿ ಕಂಡುಬಂದಿರುವುದು ಜನರನ್ನು ಬೆರಗುಗೊಳಿಸಿದೆ. ಹೆದ್ದಾರಿಯ ಬಗ್ಗೆ ಮತ್ತು ಸಮಾಧಿಯ ಬಗ್ಗೆ ಸಂಶೋಧಕರು ಹೆಚ್ಚಿನ ಮಾಹಿತಿಗಾಗಿ ಹುಡುಕುತ್ತಿದ್ದಾರೆ.