HEALTH TIPS

ರಾಜ್ಯದಲ್ಲಿಂದು ಟಿಪಿಆರ್ 45.7 ಶೇ: 50 ಸಾವಿರಕ್ಕಿಂತ ಹೆಚ್ಚುಮಂದಿಗೆ ಇಂದು ಕೋವಿಡ್ ಪತ್ತೆ

                                   ತಿರುವನಂತಪುರ: ರಾಜ್ಯದಲ್ಲಿ ಇಂದು 50,812 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 11,103, ತಿರುವನಂತಪುರಂ 6647, ಕೋಝಿಕ್ಕೋಡ್ 4490, ಕೊಟ್ಟಾಯಂ 4123, ತ್ರಿಶೂರ್ 3822, ಕೊಲ್ಲಂ 3747, ಮಲಪ್ಪುರಂ 2996, ಪಾಲಕ್ಕಾಡ್ 2748, ಕಣ್ಣೂರು 2252, ಆಲಪ್ಪುಳ 2213, ಪತ್ತನಂತಿಟ್ಟ 2176, ಇಡುಕ್ಕಿ 1936, ವಯನಾಡ್ 1593, ಕಾಸರಗೋಡು 966 ಎಂಬಂತೆ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 1,10,970 ಮಾದರಿಗಳನ್ನು ಪರೀಕ್ಷಿಸಲಾಗಿದೆ.

                     ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,98,406 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 4,86,748 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 11,658 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 1386 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 3,36,202 ಕೊರೋನಾ ಪ್ರಕರಣಗಳಲ್ಲಿ, ಕೇವಲ 3.4 ಪ್ರತಿಶತದಷ್ಟು ಜನರು ಆಸ್ಪತ್ರೆ /ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

                ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ ಎಂಟು ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 86 ಸಾವುಗಳು ಮತ್ತು ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 311 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 53,191ಕ್ಕೆ ಏರಿಕೆಯಾಗಿದೆ. ಇಂದು ಸೋಂಕು ಪತ್ತೆಯಾದವರಲ್ಲಿ 208 ಮಂದಿ ಹೊರ ರಾಜ್ಯದವರು. 46,451 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 3751 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 402 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ. 

               47,649 ಮಂದಿ ಜನರಿಗೆ ರೋಗನಿರ್ಣಯಗೊಂಡು  ಚಿಕಿತ್ಸೆ ನೀಡಲಾಗಿ ಗುಣಮುಖರಾಗಿದ್ದಾರೆ. ತಿರುವನಂತಪುರ 8235, ಕೊಲ್ಲಂ 4377, ಪತ್ತನಂತಿಟ್ಟ 1748, ಆಲಪ್ಪುಳ 1785, ಕೊಟ್ಟಾಯಂ 3033, ಇಡುಕ್ಕಿ 1445, ಎರ್ನಾಕುಳಂ 8571, ತ್ರಿಶೂರ್ 5905, ಪಾಲಕ್ಕಾಡ್ 2335, ಮಲಪ್ಪುರಂ 2809, ಕೋಝಿಕ್ಕೋಡ್ 4331, ವಯನಾಡ್ 829, ಕಣ್ಣೂರು 1673, ಕಾಸರಗೋಡು 573 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 3,36,202 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 55,41,834 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries