HEALTH TIPS

ರಾಜ್ಯದಲ್ಲಿ ಕೊರೋನಾ ಪ್ರಸರಣದಲ್ಲಿ ಹೆಚ್ಚಳ: ಇಂದು 49,771 ಮಂದಿಗೆ ಕೋವಿಡ್ ಪತ್ತೆ: ಎರ್ನಾಕುಳಂ ಒಂದರಲ್ಲೇ 9567 ಹೊಸ ಸೋಂಕಿತರು


        ತಿರುವನಂತಪುರ: ರಾಜ್ಯದಲ್ಲಿ ಇಂದು 49,771 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ. ಎರ್ನಾಕುಳಂ 9567, ತಿರುವನಂತಪುರ 6945, ತ್ರಿಶೂರ್ 4449, ಕೋಝಿಕ್ಕೋಡ್ 4196, ಕೊಲ್ಲಂ 4177, ಕೊಟ್ಟಾಯಂ 3922, ಪಾಲಕ್ಕಾಡ್ 2683, ಮಲಪ್ಪುರಂ 2517, ಆಲಪ್ಪುಳ 2506, ಕಣ್ಣೂರು 2333, ಇಡುಕ್ಕಿ 2203, ಪತ್ತನಂತಿಟ್ಟ 2039, ವಯನಾಡ್ 1368, ಕಾಸರಗೋಡು 866 ಎಂಬಂತೆ ಸೋಂಕು ದೃಢಪಟ್ಟಿದೆ.
        ಕಳೆದ 24 ಗಂಟೆಗಳಲ್ಲಿ 1,03,553 ಮಾದರಿಗಳನ್ನು ಪರೀಕ್ಷಿಸಲಾಗಿದೆ.
       ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,57,329 ಮಂದಿ ಜನರು ನಿಗಾದಲ್ಲಿದ್ದಾರೆ.  ಇವರಲ್ಲಿ 4,46,391 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 10,938 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.  ಒಟ್ಟು 1346 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
       ಪ್ರಸ್ತುತ, 3,00,556 ಕೊರೋನಾ ಪ್ರಕರಣಗಳಲ್ಲಿ, ಕೇವಲ 3.6 ಪ್ರತಿಶತದಷ್ಟು ಜನರು ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
       ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 63 ಮಂದಿ ಮೃತರಾಗಿದ್ದಾರೆ.ಅಲ್ಲದೆ, ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 77 ಸಾವುಗಳು ವರದಿಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 52,281ಕ್ಕೆ ಏರಿಕೆಯಾಗಿದೆ.
          ಇಂದು, ಸೋಂಕು ಪತ್ತೆಯಾದವರಲ್ಲಿ 196 ಮಂದಿ ಜನರು ಹೊರ ರಾಜ್ಯದವರು.  ಒಟ್ಟು 45,846 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ.  3272 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 457 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪತ್ತೆಯಾಗಿದೆ.
       ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 34,439 ಮಂದಿ ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರ 9582, ಕೊಲ್ಲಂ 755, ಪತ್ತನಂತಿಟ್ಟ 536, ಆಲಪ್ಪುಳ 1043, ಕೊಟ್ಟಾಯಂ 2364, ಇಡುಕ್ಕಿ 955, ಎರ್ನಾಕುಳಂ 4768, ತ್ರಿಶೂರ್ 3600, ಪಾಲಕ್ಕಾಡ್ 1539, ಮಲಪ್ಪುರಂ 1681, ಕೋಯಿಕ್ಕೋಡ್ 3381, ವಯನಾಡ್ 520, ಕಣ್ಣೂರು 1814, ಕಾಸರಗೋಡು  1901 ಎಂಬಂತೆ ಗುಣಮುಖರಾಗಿದ್ದಾರೆ.
        ಇದರೊಂದಿಗೆ 3,00,556 ಮಂದಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 54,21,307 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries