ತಿರುವನಂತಪುರ: ರಾಜ್ಯದಲ್ಲಿ ಇಂದು 50 ಮಂದಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಒಮಿಕಾನ್ ಎರ್ನಾಕುಳಂ 18, ತಿರುವನಂತಪುರಂ 8, ಪತ್ತನಂತಿಟ್ಟ 7, ಕೊಟ್ಟಾಯಂ, ಮಲಪ್ಪುರಂ 5, ಕೊಲ್ಲಂ 3, ಅಲಪ್ಪುಳ, ತ್ರಿಶೂರ್ ಮತ್ತು ಪಾಲಕ್ಕಾಡ್ ತಲಾ 1 ಎಂಬಂತೆ ದೃಢಪಡಿಸಿದೆ.
ಹೊಸದಾಗಿ ರೋಗನಿರ್ಣಯ ಮಾಡಿದವರಲ್ಲಿ, 45 ಕಡಿಮೆ-ಅಪಾಯದ ದೇಶಗಳಿಂದ ಮತ್ತು 5 ಹೆಚ್ಚಿನ ಅಪಾಯದ ದೇಶಗಳಿಂದ ಬಂದವರು. ಇದರಿಂದ ರಾಜ್ಯದಲ್ಲಿ ಒಮಿಕ್ರಾನ್ ಬಾಧಿತರ ಸಂಖ್ಯೆ 280ಕ್ಕೆ ಏರಿಕೆಯಾಗಿದೆ. ಯಾರಿಗೂ ಸಂಪರ್ಕದಿಂದ ಸೋಂಕು ಬಾಧಿಸಿಲ್ಲ. 186 ಕಡಿಮೆ ಅಪಾಯದ ದೇಶಗಳಿಂದ ಮತ್ತು ಒಟ್ಟು 64 ಹೆಚ್ಚಿನ ಅಪಾಯದ ದೇಶಗಳಿಂದ ಬಂದವರು. ರಾಜ್ಯದಲ್ಲಿ ಒಟ್ಟು 30 ಜನರಿಗೆ ಈವರೆಗೆ ಸಂಪರ್ಕದ ಮೂಲಕ ಸೋಂಕು ತಗುಲಿದೆ.
ಎರ್ನಾಕುಲಂ-ಯುಎಇ 13, ಕತಾರ್ 4, ಸ್ವೀಡನ್ 1, ತಿರುವನಂತಪುರಂ-ಯುಎಇ 4, ಸೌದಿ ಅರೇಬಿಯಾ, ಮಾಲ್ಡೀವ್ಸ್, ಯುಕೆ, ಇಟಲಿ ತಲಾ 1, ಪತ್ತನಂತಿಟ್ಟ-ಯುಎಇ 4, ಯುಎಸ್‌ಎ 2, ಕತಾರ್ 1, ಕೊಟ್ಟಾಯಂ-ಯುಎಸ್ಎ 2, ಯುಕೆ, ಯುಎಇ ಮತ್ತು ಉಕ್ರೇನ್ ತಲಾ 1 ., ಮಲಪ್ಪುರಂ - ಯುಎಇ 5, ಕೊಲ್ಲಂ - ಯುಎಇ 3, ಆಲಪ್ಪುಳ - ಸಿಂಗಾಪುರ್ 1, ತ್ರಿಶೂರ್ - ಯುಎಇ 1, ಪಾಲಕ್ಕಾಡ್ - ಯುಎಇ 1. ಕೊಯಮತ್ತೂರಿನವರಾದ ಒಬ್ಬರಿಗೆ ಸೋಂಕು ಬಾಧಿಸಿದ್ದು ಇವರು ಈಜಿಪ್ಟ್‌ನಿಂದ ಬಂದವರು.