ಬೆಂಗಳೂರು: ಸ್ಟಾರ್ಟ್-ಅಪ್‌ಗಳ ರಾಜಧಾನಿಯಾಗಿದ್ದ ಬೆಂಗಳೂರನ್ನು ರಾಷ್ಟ್ರ ರಾಜಧಾನಿ ದೆಹಲಿ ಹಿಂದಿಕ್ಕಿ ಅತೀ ಹೆಚ್ಚು ಸ್ಟಾರ್ಟ್-ಅಪ್‌ಗಳ ನಗರವಾಗಿ ಮೇಲುಗೈ ಸಾಧಿಸಿದೆ.
ಬೆಂಗಳೂರು: ಸ್ಟಾರ್ಟ್-ಅಪ್‌ಗಳ ರಾಜಧಾನಿಯಾಗಿದ್ದ ಬೆಂಗಳೂರನ್ನು ರಾಷ್ಟ್ರ ರಾಜಧಾನಿ ದೆಹಲಿ ಹಿಂದಿಕ್ಕಿ ಅತೀ ಹೆಚ್ಚು ಸ್ಟಾರ್ಟ್-ಅಪ್‌ಗಳ ನಗರವಾಗಿ ಮೇಲುಗೈ ಸಾಧಿಸಿದೆ.
ಸಂಸತ್ತಿನಲ್ಲಿ ಮಂಡಿಸಿದ 2021-21 ರ ಆರ್ಥಿಕ ಸಮೀಕ್ಷೆ ವರದಿ ಪ್ರಕಾರ, ಎಪ್ರಿಲ್ 2019 ರಿಂದ ಡಿಸೆಂಬರ್ 2021 ರವರೆಗೆ ಬೆಂಗಳೂರಿನಲ್ಲಿ 4,514 ಸ್ಟಾರ್ಟ್-ಅಪ್‌ಗಳು ಹೊಸದಾಗಿ ಆರಂಭವಾದರೆ, ದೆಹಲಿಯಲ್ಲಿ 5000 ಕ್ಕೂ ಹೆಚ್ಚಿನ ಹೊಸ ಸ್ಟಾರ್ಟ್-ಅಪ್‌ಗಳು ಅಧಿಕೃತವಾಗಿ ನೋಂದಣಿಗೊಂಡಿದೆ ಎಂದು ವರದಿ.
11,308 ಹೊಸ ಸ್ಟಾರ್ಟ್-ಅಪ್‌ಗಳ ನೋಂದಣಿಯೊಂದಿಗೆ ಮಹಾರಾಷ್ಟ್ರ ಅತೀ ಹೆಚ್ಚು ಸ್ಟಾರ್ಟ್-ಅಪ್ ಹೊಂದಿರುವ ರಾಜ್ಯವಾಗಿದೆ. 2022 ಜನವರಿ 10 ರ ಹೊತ್ತಿದೆ ದೇಶಾದ್ಯಂತ 61,400 ಸ್ಟಾರ್ಟ್-ಅಪ್‌ಗಳು ಸೇರಿಕೊಂಡಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
2021 ರಲ್ಲಿ 44 ಸ್ಟಾರ್ಟ್-ಅಪ್‌ಗಳು ಯುನಿಕಾರ್ನ್‌ಗಳಾಗಿದ್ದು, ಯುನಿಕಾರ್ನ್ ಸ್ಟಾರ್ಟ್-ಅಪ್‌ಗಳ ಸಂಖ್ಯೆಯ ಆಧಾರದಲ್ಲಿ ವಿಶ್ವಾದ್ಯಂತ ಭಾರತವು ಮೂರನೆ ಸ್ಥಾನ ಪಡೆದಿದೆ. ಮೊದಲೆರಡು ಸ್ಥಾನದಲ್ಲಿ ಅಮೇರಿಕಾ ಮತ್ತು ಚೀನಾ ಇದೆ.
2021 ರಲ್ಲಿ, 555 ಜಿಲ್ಲೆಗಳಲ್ಲಿ ಕನಿಷ್ಠ ಒಂದು ಹೊಸ ಸ್ಟಾರ್ಟ್-ಅಪ್ ಹುಟ್ಟಿಕೊಂಡಿದೆ. 2016-17ರಲ್ಲಿ ಕೇವಲ 121 ಜಿಲ್ಲೆಗಳಲ್ಲಿ ಕನಿಷ್ಠ ಒಂದು ಹೊಸ ಸ್ಟಾರ್ಟ್‌ಅಪ್ ಅನ್ನು ಹುಟ್ಟಿಕೊಂಡಿತ್ತು.