ತಿರುವನಂತಪುರ: ರಾಜ್ಯದಲ್ಲಿ ಇಂದು 5797 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಿರುವನಂತಪುರ 1486, ಎರ್ನಾಕುಳಂ 929, ಕೋಝಿಕ್ಕೋಡ್ 561, ಕೊಟ್ಟಾಯಂ 447, ತ್ರಿಶೂರ್ 389, ಕಣ್ಣೂರು 319, ಕೊಲ್ಲಂ 311, ಮಲಪ್ಪುರಂ 267, ಪತ್ತನಂತಿಟ್ಟ 266, ಆಲಪ್ಪುಳ 264, ಪಾಲಕ್ಕಾಡ್ 222, ಇಡುಕ್ಕಿ 153, ಕಾಸರಗೋಡು 116, ವಯನಾಡ್ 67 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 45,691 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತ (WIPR) 10 ಕ್ಕಿಂತ ಹೆಚ್ಚಿನ 5 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 6 ವಾರ್ಡ್‌ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,20,368 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,17,548 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 2,820 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 257 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ 37,736 ಕೋವಿಡ್ ಪ್ರಕರಣಗಳಲ್ಲಿ, ಕೇವಲ 6.3 ಶೇಕಡಾ ಜನರು ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 19 ಮಂದಿ ಮೃತರಾಗಿದ್ದಾರೆ. ಜೊತೆಗೆ, ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 147 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 49,757ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 112 ಮಂದಿ ಜನರು ಹೊರ ರಾಜ್ಯದವರು. 5309 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 320 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 56 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2796 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 688, ಕೊಲ್ಲಂ 19, ಪತ್ತನಂತಿಟ್ಟ 258, ಆಲಪ್ಪುಳ 131, ಕೊಟ್ಟಾಯಂ 187, ಇಡುಕ್ಕಿ 90, ಎರ್ನಾಕುಳಂ 402, ತ್ರಿಶೂರ್ 306, ಪಾಲಕ್ಕಾಡ್ 91, ಮಲಪ್ಪುರಂ 82, ಕೋಝಿಕ್ಕೋಡ್ 249, ವಯನಾಡ್ 71, ಕಣ್ಣೂರು 180, ಕಾಸರಗೋಡು 42 ಮಂದಿ ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 37,736 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 52,03,146 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.