ನವದೆಹಲಿ: ರೈಲ್ವೇ ಭದ್ರತಾಪಡೆ ಸಿಬ್ಬಂದಿ ಕಳೆದ ವರ್ಷ ದೇಶಾದ್ಯಂತ ಒಟ್ಟು 600 ಮಂದಿಯ ಜೀವರಕ್ಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ಬಹಿ ರಂಗವಾಗಿದೆ.
ರೈಲ್ವೇ ಭದ್ರತಾ ಪಡೆ ಸಿಬ್ಬಂದಿಯಿಂಡ ರಕ್ಷಣೆಗೆ ಒಳಗಾದವರಲ್ಲಿ ಆತ್ಮಹತ್ಯೆಗೆ ಯತ್ನಿಸಿದವರು, ಕಳ್ಳಸಾಗಣೆ ಮಾಡಲ್ಪಡುತ್ತಿದ್ದ ಮಕ್ಕಳು, ರೈಲ್ವೇ ಅಪಘಾತಕ್ಕೆ ಒಳಗಾಗುತ್ತಿದ್ದವರು ಸೇರಿದ್ದಾರೆ.
ಮಕ್ಕಳ ಕಳ್ಳಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ 130ಕ್ಕಘೆಚ್ಚು ಸಹಾಯಕೇಂದ್ರಗಳನ್ನು ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ತೆರೆಯಲಾಗಿದೆ. ಕಳ್ಳಸಾಗಣೆದಾರರಿಂದ ರಕ್ಷಿಸಲ್ಪಟ್ಟ ಮಕ್ಕಳ ಭವಿಷ್ಯಕ್ಕೆ ದಾರಿ ತೋರುವ ಸಲುವಾಗಿ ಎನ್ ಜಿ ಒ ಸಹಯೋಗವನ್ನು ಪಡೆದುಕೊಳ್ಳಲಾಗುತ್ತಿದೆ.