ನವದೆಹಲಿ: ವಿದೇಶಿ ದೇಣಿಗೆ ಸ್ವೀಕಾರಕ್ಕೆ ಅಗತ್ಯವಿರುವ ಪರವಾನಗಿ (ಎಫ್ ಸಿಆರ್ ಎ) ನೋಂದಣಿಯನ್ನು ಭಾರತದ 6,000 ಸಂಸ್ಥೆಗಳು ಕಳೆದುಕೊಳ್ಳಲಿವೆ.
ಐಐಟಿ ದೆಹಲಿ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಭಾರತೀಯ ವೈದ್ಯಕೀಯ ಸಂಘ, ನೆಹರು ಮೆಮೊರಿಯಲ್ ಮ್ಯೂಸಿಯಮ್ ಹಾಗೂ ಗ್ರಂಥಾಲಯಗಳು ಸೇರಿ 6,000 ಸಂಸ್ಥೆಗಳ ಎಫ್ ಸಿಆರ್ ಎ ನೋಂದಣಿ ರದ್ದಾಗಿದೆ.
ಈ ಸಂಸ್ಥೆಗಳು ಒಂದೋ ಎಫ್ ಸಿಆರ್ ಎ ಪರವಾನಗಿಗಳನ್ನು ನವೀಕರಣಗೊಳಿಸಲು ಅರ್ಜಿ ಸಲ್ಲಿಸಿರಲಿಲ್ಲ ಅಥವಾ ಕೇಂದ್ರ ಗೃಹ ಸಚಿವಾಲಯ ಅರ್ಜಿಗಳನ್ನು ತಿರಸ್ಕರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧಿಕೃತ ವೆಬ್ ಸೈಟ್ ನ ಪ್ರಕಾರ ಎಫ್ ಸಿಆರ್ ಎ ಸಿಂಧುತ್ವ ಕಳೆದುಕೊಂಡಿರುವ ಪಟ್ಟಿಯಲ್ಲಿ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್, ಲಾಲ್ ಬಹದ್ದೂರ್ ಶಾಸ್ತ್ರಿ ಮೆಮೊರಿಯಲ್ ಫೌಂಡೇಷನ್, ಮಹಿಳೆಯರಿಗಾಗಿ ಇರುವ ಲೇಡಿ ಶ್ರೀರಾಮ್ ಕಾಲೇಜು, ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ಆಕ್ಸ್ಫಾಮ್ ಇಂಡಿಯಾ ಸಂಸ್ಥೆಗಳು ಇವೆ.