ತಿರುವನಂತಪುರ: ರಾಜ್ಯದಲ್ಲಿ ಇಂದು 62 ಮಂದಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ತ್ರಿಶೂರ್ 14, ಕಣ್ಣೂರು 11, ಪತ್ತನಂತಿಟ್ಟ 9, ಎರ್ನಾಕುಳಂ 8, ಕೋಝಿಕ್ಕೋಡ್ ಮತ್ತು ತಿರುವನಂತಪುರಂ 5, ಕೊಲ್ಲಂ, ಆಲಪ್ಪುಳ, ಪಾಲಕ್ಕಾಡ್, ಕಾಸರಗೋಡು ತಲಾ 2 ಮತ್ತು ಇಡುಕ್ಕಿ 1 ಎಂಬಂತೆ ಒಮಿಕ್ರಾನ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಮಿಕ್ರಾನ್ ಬಾಧಿತರ ಒಟ್ಟು ಸಂಖ್ಯೆ 707ಕ್ಕೆ ಏರಿಕೆಯಾಗಿದೆ.
ನಿನ್ನೆಯೂ 54 ಮಂದಿಗೆ ಒಮಿಕ್ರಾನ್ ದೃಢಪಟ್ಟಿತ್ತು. ಇಂದು ಪತ್ತೆಯಾದವರಲ್ಲಿ ಒಬ್ಬರು ಯುಎಇ ಯಿಂದ ಬಂದ ತಮಿಳುನಾಡು ಮೂಲದವರು. 49 ಕಡಿಮೆ ಅಪಾಯದ ದೇಶಗಳಿಂದ ಮತ್ತು ಒಂದು ಹೆಚ್ಚಿನ ಅಪಾಯದ ದೇಶಗಳಿಂದ ಬಂದವರು. 4 ಮಂದಿ ಬೇರೆ ರಾಜ್ಯಗಳಿಂದ ಬಂದವರು. 8 ಜನರ ಸಂಪರ್ಕದ ಮೂಲಕ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದರು.
707 ರಲ್ಲಿ, 483 ಕಡಿಮೆ-ಅಪಾಯದ ದೇಶಗಳಿಂದ ಮತ್ತು ಒಟ್ಟು 108 ಹೆಚ್ಚಿನ ಅಪಾಯದ ದೇಶಗಳಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 88 ಜನರಿಗೆ ಸೋಂಕು ತಗುಲಿದೆ. ಬೇರೆ ರಾಜ್ಯಗಳಿಂದ ಬಂದ 28 ಮಂದಿಗೆ ಒಮಿಕ್ರಾನ್ ಖಚಿತಪಡಿಸಲಾಗಿದೆ.