ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ವತಿಯಿಂದ 73ನೇ ಗಣರಾಜ್ಯೋತ್ಸವ ಆಚರಣೆಯನ್ನು ಕೋವಿಡ್ ನಿಯಂತ್ರಣ ನಿಬಂಧನೆಯನ್ವಯ ಸರಳವಾಗಿ ಆಚರಿಸಲಾಯಿತು. ಗ್ರಾಮ ಪಂಚಾಯತು ಕಚೇರಿ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಎಣ್ಮಕಜೆ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಧ್ವಜಾರೋಹಣಗೈದರು. ಪಂಚಾಯತಿ ಉದ್ಯೋಗಿಗಳು, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಪ್ರೇರಕ್ ಅನಂದ ಕೆ. ಮೊದಲಾದವರು ಪಾಲ್ಗೊಂಡಿದ್ದರು.