ಪತ್ತನಂತಿಟ್ಟ: ಅಯ್ಯಪ್ಪ ದರ್ಶನಕ್ಕಾಗಿ ವಿಶೇಷ ಚೇತನ ಭಕ್ತರೊಬ್ಬರು 750 ಕಿ.ಮೀ ದೂರವನ್ನು ಒಂದೇ ಪಾದದಲ್ಲಿ ಕ್ರಮಿಸಿ ಸನ್ನಿಧಾನ ತಲುಪಿರುವುದು ವರದಿಯಾಗಿದೆ. ಆಂಧ್ರಪ್ರದೇಶ ಮೂಲದ ಸುರೇಶ್ ಅವರು ಊರುಗೋಲಿನ ಸಹಾಯದಿಂದ ಒಂದೇ ಕಾಲಿನಲ್ಲಿ ಸನ್ನಿಧಾನಂ ತಲುಪಿದ ವಿಶೇಷ ಭಕ್ತ. ಸುರೇಶ್ ಆಂಧ್ರಪ್ರದೇಶದ ನೆಲ್ಲೂರು ಮೂಲದವರು. ಅಖಿಲ ಭಾರತ ಅಯ್ಯಪ್ಪದೀಕ್ಷಾ ಪ್ರಚಾರ ಸಮಿತಿಯ ಸದಸ್ಯರೂ ಆಗಿದ್ದಾರೆ.
ಸೆಪ್ಟೆಂಬರ್ 20ರಂದು ಸುರೇಶ್ ಅವರ ಯಾತ್ರೆ ಆರಂಭವಾಗಿತ್ತು. ದಿನಕ್ಕೆ ಗರಿಷ್ಠ ಎಂಟು ಕಿಲೋಮೀಟರ್ ನಡೆದಿರುವರು. ದಾರಿಯಲ್ಲಿ ಲಭ್ಯವಾಗುವ ದೇವಾಲಯಗಳಲ್ಲಿ ರಾತ್ರಿ ತಂಗುತ್ತಿದ್ದರು. 105 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಸುರೇಶ್ ನಿನ್ನೆ ಸನ್ನಿಧಾನ ತಲುಪಿದ್ದಾರೆ. ಅವರನ್ನು ವಿಶೇಷ ಪರಿಗಣನೆಯೊಂದಿಗೆ ಸನ್ನಿಧಾನಕ್ಕೆ ಕರೆತರಲಾಯಿತು. ಸುರೇಶ್ ಅವರ ಇಳಿವಯಸ್ಸಿಗೆ ನೆಮ್ಮದಿಯ ಸ್ವಾಮಿ ದರ್ಶನ ಸಿಕ್ಕ ಖುಷಿ ಅವರನ್ನು ಪುಳಕಗೊಳಿಸಿತು.