ನವದೆಹಲಿ: ದೇಶದಲ್ಲಿನ ಕೋವಿಡ್ ಲಸಿಕಾ ಅಭಿಯಾನ ಮುಂದುವರೆದಿರುವಂತೆಯೇ ಭಾನುವಾರ ದೇಶದ ಶೇ.75ರಷ್ಟು ನಾಗರೀಕರಿಹಗೆ ಸಂಪೂರ್ಣ ಪ್ರಮಾಣದ ಲಸಿಕೆ ನೀಡಲಾಗಿದ್ದು, ಈ ಕುರಿತಂತೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
‘ಎಲ್ಲ ವಯಸ್ಕರಲ್ಲಿ ಶೇಕಡಾ 75 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ. ಈ ಮಹತ್ವದ ಸಾಧನೆಗಾಗಿ ನಮ್ಮ ಸಹ ನಾಗರಿಕರಿಗೆ ಅಭಿನಂದನೆಗಳು’ ಎಂದು ಮೋದಿ ತಿಳಿಸಿದ್ದಾರೆ.
ದೇಶದಲ್ಲಿ ಎಲ್ಲ ವಯಸ್ಕರಲ್ಲಿ ಶೇಕಡಾ 75 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ. ಕೋವಿಡ್ ವಿರುದ್ಧ ಹೋರಾಡಲು ಲಸಿಕೆಯೊಂದೇ ಮಾರ್ಗ. ಇದಕ್ಕಾಗಿ ಸಹಕರಿಸುತ್ತಿರುವ ದೇಶದ ಜನರಿಗೆ ಧನ್ಯವಾದ ಎಂದು ಮೋದಿ ತಿಳಿಸಿದ್ದಾರೆ.
ಅಂತೆಯೇ ನಮ್ಮ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸುತ್ತಿರುವ ನಾಗರೀಕರಿಗೆ ಧನ್ಯವಾದ ತಿಳಿಸಿರುವ ಪ್ರಧಾನಿ ಮೋದಿ ಲಸಿಕೀಕರಣದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ಅಲ್ಲದೆ ಇದು ಎಲ್ಲರಿಗೂ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.