ನವದೆಹಲಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲದ ಮೂರು ರಿಯಲ್ ಎಸ್ಟೇಟ್ ಸಮೂಹಗಳ ಮೇಲೆ ಈಚೆಗೆ ದಾಳಿ ನಡೆಸಿದ್ದು, ಸುಮಾರು 800 ಕೋಟಿ ಮೊತ್ತದ ನಿಯಮಬಾಹಿರ ವಹಿವಾಟು ನಡೆದಿರುವುದನ್ನು ಪತ್ತೆ ಹಚ್ಚಿದ್ದಾರೆ.
ನವದೆಹಲಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲದ ಮೂರು ರಿಯಲ್ ಎಸ್ಟೇಟ್ ಸಮೂಹಗಳ ಮೇಲೆ ಈಚೆಗೆ ದಾಳಿ ನಡೆಸಿದ್ದು, ಸುಮಾರು 800 ಕೋಟಿ ಮೊತ್ತದ ನಿಯಮಬಾಹಿರ ವಹಿವಾಟು ನಡೆದಿರುವುದನ್ನು ಪತ್ತೆ ಹಚ್ಚಿದ್ದಾರೆ.
ಈ ಸಮೂಹಗಳು ಭೂಮಿ ಅಭಿವೃದ್ಧಿ ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿದ್ದವು. ಜನವರಿ 5ರಂದು ಕುರ್ನೂಲ್, ಅನಂತಪುರ, ಕಡಪ, ನಂದ್ಯಾಲ್ ಸೇರಿದಂತೆ ವಿವಿಧೆಡೆ ಈ ಸಮೂಹಗಳಿಗೆ ಸೇರಿದ 24ಕ್ಕೂ ಅಧಿಕ ತಾಣಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅಧಿಕಾರಿಗಳು ಈ ಸಮೂಹಗಳ ಹೆಸರು ಬಹಿರಂಗಪಡಿಸಿಲ್ಲ.
ಕೈನಲ್ಲಿ ಬರೆದಿದ್ದ ಪುಸ್ತಕಗಳು, ಒಪ್ಪಂದಗಳು, ಡಿಜಿಟಲ್ ಡಾಟಾ ಸೇರಿದಂತೆ ವಿವಿಧ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಒಂದು ಸಮೂಹವು ದಾಖಲೆಯಿಲ್ಲದ ಹಣ ಕುರಿತ ಮಾಹಿತಿಯನ್ನು ಅಳಿಸಿಹಾಕುವಂತೆ ಸಾಫ್ಟ್‌ವೇರ್ ಅನ್ನು ತಿರುಚಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಮೂಹಗಳು ನೋಂದಣಿಯಾದ ಮೊತ್ತಕ್ಕಿಂತಲೂ ಹೆಚ್ಚಿನ ಹಣವನ್ನು ಸ್ವೀರಿಸುತ್ತಿದ್ದವು. ಈ ಮೊತ್ತವನ್ನೇ ಬಳಸಿ ಆಸ್ತಿ ಖರೀದಿಸುತ್ತಿದ್ದವು. ಹೀಗೆ ನಡೆದಿರುವ ವಹಿವಾಟಿನ ಮೊತ್ತ 800ಕೋಟಿಗೂ ಅಧಿಕ ಎಂದು ಇಲಾಖೆಯ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.