ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜ.30ರಂದು ಮಾಸಿಕ ರೇಡಿಯಾ ಕಾರ್ಯಕ್ರಮ 85ನೇ ಆವೃತ್ತಿಯ ಮನ್ ಕಿ ಬಾತ್'ನಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಈ ಕುರಿತು ಪ್ರಧಾನಮಂತ್ರಿಗಳ ಕಚೇರಿ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 30 ರಂದು ಬೆಳಿಗ್ಗೆ 11:30 ಕ್ಕೆ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ನ 85 ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಈ ವರ್ಷದ ಮೊದಲ ಆವೃತ್ತಿಯಾಗಲಿದೆ. ಜನವರಿ 30 ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ ದಿನವಾಗಿದ್ದು, ಈ ದಿನ ಗಾಂಧೀಜಿಯವರನ್ನು ಸ್ಮರಿಸಿದ ಬಳಿಕ ಮನ್ ಕಿ ಬಾತ್ ನಲ್ಲಿ ಜನತೆಯನ್ನುದ್ದೇಶಿಸಿ ಪ್ರಧಾಮಂತ್ರಿಗಳು ಭಾಷಣ ಮಾಡಲಿದ್ದಾರೆಂದು ಹೇಳಿದೆ.
ಈ ಹಿಂದೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿಯವರು, 2022ರ ಜ.30 ರಂದು ರ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ನಡೆಯಲಿದೆ. ಸ್ಫೂರ್ತಿದಾಯಕ ಜೀವನ ಕಥೆಗಳು ಹಾಗೂ ಸಾಕಷ್ಟು ವಿಚಾರಗಳ ಹಂಚಿಕೊಳ್ಳಲೀದ್ದೀರಿ ಎಂಬ ಭರವಸೆ ನನಗಿದೆ. ನಿಮ್ಮ ಕಥೆಗಳು ಹಾಗೂ ವಿಚಾರಗಳನ್ನು@mygovindia ಅಥವಾ NaMo ಅಪ್ಲಿಕೇಶನ್‌ನಲ್ಲಿ ಹಂಚಿಕೊಳ್ಳಿ. 1800-11-7800 ಡಯಲ್ ಮಾಡುವ ಮೂಲಕ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ ಎಂದು ತಿಳಿಸಿದ್ದರು.