ಉಪ್ಪಳ: ಕಯ್ಯಾರು ಸೊಂದಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಕೆಲಸ ಆರಂಭಗೊಂಡಿದ್ದು, ಶಿಲಾಮಯ ಗರ್ಭಗುಡಿ ನಿರ್ಮಾಣಕ್ಕೆ ಬೇಕಾದ ಶಿಲೆಯನ್ನು ಕಾರ್ಕಳದಿಂದ ಶ್ರಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲು ಶಿಲಾ ಮೆರವಣಿಗೆ ಜ. 8ರಂದು ಬೆಳಿಗ್ಗೆ 8.30ಕ್ಕೆ ಜೋಡುಕಲ್ಲಿನಲ್ಲಿ ಭವ್ಯ ಸ್ವಾಗತ ನೀಡಿ ವಾದ್ಯ ಘೋಷದೊಂದಿಗೆ ಶಿಲಾ ಮೆರವಣಿಗೆ ನಡೆಯಲಿದೆ. ಅಂದು ಶ್ರೀ ಕ್ಷೇತ್ರದಲ್ಲಿ ಗಣಪತಿ ಹವನ, ನವಕ ಕಲಶಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ.