ಬೆಂಗಳೂರು: ದೇಶದಲ್ಲಿ ಬೂಸ್ಟರ್ ಡೋಸ್ ಕೊರೊನಾ ಲಸಿಕೆ ಕುರಿತಾಗಿ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಮಹತ್ವದ ಸೂಚನೆಯೊಂದು ಹೊರಬಿದ್ದಿದೆ. ಅದೇನೆಂದರೆ ಕೊರೊನಾ ಎರಡೂ ಡೋಸ್ ಲಸಿಕೆ ಪಡೆದ ನಂತರವೂ ಕೊರೊನಾ ಸೋಂಕಿಗೆ ತುತ್ತಾಗಿದ್ದಲ್ಲಿ, ಅಂಥವರು ಸೋಂಕು ಪತ್ತೆಯಾದ ದಿನದಿಂದ ಕನಿಷ್ಠ 90 ದಿನಗಳಾದ ನಂತರವಷ್ಟೇ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು ಎಂಬುದು.
ಬೂಸ್ಟರ್ ಡೋಸ್ ಪಡೆದು 28 ದಿನಗಳು ಕಳೆದ ನಂತರ ಕೊರೊನಾ ನಿರೋಧಕ ಆಂಟಿ ಬಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿಯಾಗುವುದು, ಹೀಗಾಗಿ ಬೂಸ್ಟರ್ ಡೋಸ್ ಪಡೆದ ನಂತರವೂ ಕೊರೊನಾ ಸೋಂಕು ತಾಕುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಹಿಂದೆ ಕೊರೊನಾ ಸೋಂಕಿಗೆ ತುತ್ತಾದವರು ಕೂಡಾ 90 ದಿನಗಳ ಬಳಿಕವಷ್ಟೇ ಬೂಸ್ಟರ್ ಡೋಸ್ ಪಡೆಯಬೇಕು. ಏಕೆಂದರೆ ಕೊರೊನಾ ಸೋಂಕಿಗೆ ತುತ್ತಾದವರ ದೇಹದಲ್ಲಿ ಕೊರೊನಾ ಸೋಂಕು ನಿರೋಧಕ ಕಣಗಳು ಉತ್ಪತ್ತಿಯಾಗಿರುತ್ತವೆ. ಹೀಗಾಗಿ ಬೂಸ್ಟರ್ ಡೋಸ್ ಅವಶ್ಯಕತೆ ಇರುವುದಿಲ್ಲ. ಅಂಥವರು 90 ದಿನಗಳ ಒಳಗೆ ಬೂಸ್ಟರ್ ಡೋಸ್ ಪಡೆದರೂ ಅದರಿಂದ ಪ್ರಯೋಜನವಿಲ್ಲ.