ನವದೆಹಲಿ: ದೇಶದಲ್ಲಿ ಕಳೆದ 10 ದಿನಗಳ ಹಿಂದೆ 10 ಸಾವಿರದ ಒಳಗೆ ಬರುತ್ತಿದ್ದ ಕೊರೋನಾ ಪ್ರಕರಣ ಸಂಖ್ಯೆ ಇದೀಗ ದಿಢೀರ್ ಅಂತಾ ವೇಗದ ಗತಿಯಲ್ಲಿ ಹೆಚ್ಚಾಗುತ್ತಿದೆ. ಇನ್ನು ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 9,170 ಹಾಗೂ ದೆಹಲಿಯಲ್ಲಿ 2,176 ಪ್ರಕರಣಗಳು ಪತ್ತೆಯಾಗಿದೆ.
ದೆಹಲಿಯಲ್ಲಿ 2,716 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು ಇದು ಕಳೆದ ಮೇ 21 ನಂತರದ ಅತೀ ಹೆಚ್ಚು ಪ್ರಕರಣವಾಗಿದೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಪಾಸಿಟಿವಿಟಿ ದರ 3.64ಕ್ಕೆ ಏರಿಕೆಯಾಗಿದೆ. ಕಳೆದ ಗುರುವಾರ 1,313 ಹಾಗೂ ಶುಕ್ರವಾರ 1,796 ಪ್ರಕರಣ ವರದಿಯಾಗಿತ್ತು.
ಮಹಾರಾಷ್ಟ್ರದಲ್ಲೂ ಕೊರೋನಾ ಪ್ರಕರಣಗಳು ಏರುಗತಿಯಲ್ಲಿ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ 9,170 ಪ್ರಕರಣ ಪತ್ತೆಯಾಗಿದ್ದು ಮುಂಬೈನಲ್ಲೇ 6,347 ಕೊರೋನಾ ಪ್ರಕರಣ ವರದಿಯಾಗಿದೆ. ಇದು ದೇಶದಲ್ಲಿ ಮೂರನೇ ಅಲೆಯ ಸಾಧ್ಯತೆಗಳನ್ನು ತೋರಿಸುತ್ತಿದೆ.
ಮಹಾರಾಷ್ಟ್ರದಲ್ಲಿ ಬರೋಬ್ಬರಿ 10 ಸಚಿವರು, 20 ಶಾಸಕರಿಗೂ ಕೊರೋನಾ ವಕ್ಕರಿಸಿದೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗೂ ಕೊರೋನಾ ಬಂದಿದ್ದು ಡಿಸಿಎಂ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.